ಬಾಗಿಲಲ್ಲೇ ಪ್ರತಿಷ್ಠಾಪನೆಗೊಂಡಿರೋ ದೇವರು, ಏಣಿ ಏರಿ ಪೂಜೆ ಸಲ್ಲಿಸೋ ಅರ್ಚಕರು

ವ್ಯಾಸರಾಯರ ಕಾಲದ ಈ ಗಣಪತಿ ದೇಗುಲ ನೋಡುವುದೇ ಒಂದು ಚೆಂದ

ಹಾಗಿದ್ರೆ ಎಲ್ಲಿದೆ ಈ ದೇಗುಲ ಅನ್ನೋದಕ್ಕೆ ಈ ಸ್ಟೋರಿ ನೋಡಿ

ಇಂತಹ ಅಪರೂಪದ ದೇವಾಲಯ ಕಾಣಸಿಗೋದು ಉತ್ತರ ಕನ್ನಡದ ಶಿರಸಿಯ ಹುಲೇಕಲ್ ನ ವ್ಯಾಸರಾಯ ಮಠದಲ್ಲಿ

ಇದನ್ನ ತೋರಣ ಗಣಪತಿ, ಬಾಗಿಲು ಗಣಪತಿ ಅಂತಲೂ ಕರೆಯುತ್ತಾರೆ

ಯಾಕೆಂದ್ರೆ ಇಲ್ಲಿ ಗಣಪತಿ ದೇವರು ತೋರಣದಂತೆ, ಬಾಗಿಲ ಬಳಿಯೇ ಪ್ರತಿಷ್ಠಾಪನೆಗೊಂಡಿದ್ದು, ಅಲ್ಲಿಯೇ ಪೂಜೆ ಕೂಡಾ ನಡೆಯುತ್ತೆ

ನೋಡೋದಕ್ಕೆ ಒಂಥರಾ ಅಚ್ಚರಿ ಅನ್ನೋ ರೀತಿಯಲ್ಲಿದೆ ಇಲ್ಲಿನ ಪೂಜೆ ಪುನಸ್ಕಾರ

ಹೀಗೆ ಏಣಿ ಏರಿ ಪೂಜೆ ಸಲ್ಲಿಸಲ್ಪಡುವ ರಾಜ್ಯದ ಏಕೈಕ ಗಣೇಶನೀತ ಎಂಬ ಉಲ್ಲೇಖವಿದೆ

ಸುಮಾರು 550 ವರ್ಷ ಹಿಂದೆ ವ್ಯಾಸರಾಯರು ಈ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದಾಗ ಅವರಿಗೆ ಲಕ್ಷ್ಮಿ ನಾರಾಯಣ ದೇವರ ಆಜ್ಞೆಯಾಯಿತಂತೆ

ದೇವಸ್ಥಾನದ ಪ್ರಾರಂಭದಲ್ಲಿ ಬಾಗಿಲಿನ ಚೌಕಟ್ಟಿಗೆ ಗೌಂಡಿಗಳು ಗಣಪತಿಯ ಚಿತ್ರ ಬಿಡಿಸಿದ್ದರು. ತಕ್ಷಣ ಹೊರಗೆ ಬರುತ್ತಿದ್ದ ವ್ಯಾಸರಾಯರನ್ನು ಯಾವುದೋ ಶಕ್ತಿ ತಡೆಯಿತು. ಕಡೆಗೆ ಧ್ಯಾನ ಮಾಡಲು ಶುರು ಮಾಡಿದಾಗ, ಆ ಚಿತ್ರದಲ್ಲೇ ಗಣೇಶನ ಸಾನಿಧ್ಯವಿರುವುದು ತಿಳಿಯಿತು. ಹೀಗಾಗಿ ಬೆಳ್ಳಿಯ ಉಬ್ಬುಶಿಲ್ಪದ ಗಣೇಶನನ್ನು ವ್ಯಾಸರಾಯರು ಇಲ್ಲಿ ಪ್ರತಿಷ್ಠಾಪಿಸಿದರು.