ಮಳೆಯಿಂದಾಗಿ ಗಗನಚುಕ್ಕಿ ಮತ್ತು ಭರಚುಕ್ಕಿ ತುಂಬಿ ಹರಿಯುತ್ತಿವೆ

ಪ್ರವಾಸಿಗರು ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳುತ್ತಿದ್ದಾರೆ

ನೀವು ಒಂದು ದಿನದ ಪ್ರವಾಸಕ್ಕೆ ಹೋಗಬೇಕೆಂದುಕೊಂಡಿದ್ದೀರಾ

ಹಾಗಾದ್ರೆ ನೀವು ಮಿಸ್ ಮಾಡ್ದೇ ನೋಡಬೇಕಾದ ಜಲಪಾತ ಅಂದ್ರೆ ಅದು ಗಗನಚುಕ್ಕಿ ಮತ್ತು ಭರಚುಕ್ಕಿ

ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತ ವೇಗವಾಗಿ ಹರಿದು ಎತ್ತರದಿಂದ ಧುಮ್ಮಿಕ್ಕುವ ನೀರು

ಈ ನೀರಿನ ರಭಸಕ್ಕೆ ಸೃಷ್ಟಿಯಾಗುವ ಮಂಜಿನ ಹನಿಗಳು, ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ

ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಕೇವಲ 130 ಕಿಲೋಮೀಟರ್ ದೂರದಲ್ಲಿರುವ ಈ ಜಲಪಾತವು ಕಾವೇರಿ ನದಿಯಿಂದ ಸೃಷ್ಟಿಯಾಗಿದೆ

ಕಾವೇರಿ ಹಾಗೂ ಕಪಿಲಾ ನದಿಗಳು ಬೆಟ್ಟ, ಗುಡ್ಡ, ಕಾಡು, ಮೇಡುಗಳನ್ನು ಸುತ್ತಿಕೊಂಡು ಗಗನದ ಎತ್ತರದಿಂದ ಗಗನಚುಕ್ಕಿಯಾಗಿ ಬರದಿಂದ ಹರಿದು ಬರಚುಕ್ಕಿಯಾಗಿ ಹರಿಯುತ್ತಾಳೆ

ಗಗನಚುಕ್ಕಿ ಜಲಪಾತವು 69 ಮೀಟರ್ ಎತ್ತರದಿಂದ ನೀರು ಹರಿದರೆ, ಬರಚುಕ್ಕಿ ಜಲಪಾತವು 90 ಮೀಟರ್ ಎತ್ತರದಿಂದ ಹರಿಯುತ್ತಾಳೆ ಈ ರೀತಿ ನದಿಯ ನೀರು ಎತ್ತರದಿಂದ ಕೆಳಗೆ ಬೀಳುವುದನ್ನು ನೋಡುವುದೇ ಒಂದು ಚೆಂದ

ಈ ಜಲಪಾತಗಳನ್ನು ಮಳೆಗಾಲದಲ್ಲಿ ನೋಡುವುದಕ್ಕೆ ರಾಜ್ಯವಲ್ಲದೆ ಹೊರರಾಜ್ಯಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಈ ಒಂದು ಜಲಪಾತಗಳಿಗೆ ಪ್ರವಾಸಿಗರು ಆಗಮಿಸುತ್ತಾರೆ