Retro Lookನಲ್ಲಿ 'ಮೊನಾಲಿಸಾ' ನಟಿ ಸದಾ ಪ್ರತ್ಯಕ್ಷ

ಟಾಲಿವುಡ್‍ನ ‘ಜಯಂ’ ಚಿತ್ರದಲ್ಲಿ ನಿತಿನ್ ಜೊತೆ ಸದಾ ಮುದ್ದಾಗಿ ನಟಿಸಿ ಫೇಮಸ್ ಆಗಿದ್ರು

ಬಳಿಕ ಕನ್ನಡದ ಮೊನಾಲಿಸಾ ಆಗಿ ಮಿಂಚಿದ ನಟಿ ಸದಾ ಸಿನಿಮಾಗಳಿಂದ ದೂರ ಸರಿದಿದ್ರು

ಆದ್ರೆ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಟಚ್‍ನಲ್ಲಿ ಇದ್ದಾರೆ ನಟಿ ಸದಾ

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಭಿನಯ ಮಾಡಿದ ಸದಾ ತೆಲುಗು, ತಮಿಳು, ಮಲೆಯಾಳಂ, ಹಿಂದಿ ಹಾಗೂ ಕನ್ನಡದ ಸಿನಿಮಾಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ

ಕನ್ನಡದಲ್ಲಿ ಮೊನಾಲಿಸ ಸಿನಿಮಾ ಮಾಡಿ ಸಕ್ಸಸ್ ಕಂಡ್ರು

ಚಿತ್ರದ ಮೊನಾಲಿಸ ಸಾಂಗ್ ಇಂದಿಗೂ ಎವರ್ ಗ್ರೀನ್ ಸಾಂಗ್‍ನ ಲಿಸ್ಟ್ ನಲ್ಲಿದೆ

ಫಸ್ಟ್ ಚಿತ್ರದಲ್ಲಿ ಸದಾ ಡಬಲ್ ಆಕ್ಟಿಂಗ್ ಮಾಡಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡ್ರು

ಸ್ಯಾಂಡಲ್‍ವುಡ್‍ನಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿದ್ರು ಸದಾ

ಮೋಹಿನಿ, ಹುಡುಗ-ಹುಡುಗಿ, ಮೈಲಾರಿ, ಮಲ್ಲಿಕಾರ್ಜುನ, ಆರಕ್ಷಕ ಸಿನಿಮಾದಲ್ಲಿ ಅಭಿನಯ ಮಾಡಿದ್ರು ಸದಾ