ಮಳೆಗಾಲದಲ್ಲಂತೂ ಕರಾವಳಿ, ಮಲೆನಾಡಿನ ಅಡುಗೆ ಕೋಣೆಯಲ್ಲಿ ವಿಶೇಷ ತಿಂಡಿ, ಖಾದ್ಯಗಳ ದರ್ಶನವಾಗುತ್ತೆ

ಅಂತಹ ತಿನಿಸುಗಳ ಸಾಲಿನಲ್ಲಿ ಪತ್ರೊಡೆಯೂ ಒಂದು

ಕೆಸುವಿನ ಎಲೆಯ ಪತ್ರೊಡೆ ಅಂದ್ರೆ ಈ ಭಾಗದ ಮಂದಿಗೆ ಬಲು ಪ್ರೀತಿ

ಹಾಗಿದ್ರೆ ಕೆಸುವಿನ ಪತ್ರೊಡೆ ತಯಾರಿಸುವುದು ಹೇಗೆ ಅನ್ನೋದನ್ನ ನೋಡೋಣ ಬನ್ನಿ

Fill in some text

ಮೊದಲು ಕೊತ್ತಂಬರಿ, ಜೀರಿಗೆ,ಮೆಂತ್ಯೆ, ಉಪ್ಪು, ಹುಣಸೆ, ಬೆಲ್ಲ, ಒಣಮೆಣಸು, ಅರಿಶಿನ, ಖಾರ, ಮಸಾಲೆ ಎಲ್ಲಾ ಸೇರಿಸಿ ರುಬ್ಬಿಕೊಂಡು ಮಸಾಲೆ ತಯಾರಿಸಬೇಕು

ನಂತರದಲ್ಲಿ ಒಂದು ತಾಸು ನೆನೆಸಿಟ್ಟುಕೊಂಡ ಅಕ್ಕಿಯನ್ನು ನುಣ್ಣಗೆ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು. ನಂತರ ಆ ಎರಡನ್ನು ಸೇರಿಸಿಕೊಳ್ಳಬೇಕು. ಜಿನುಗು ರವೆಯನ್ನು ಸ್ವಲ್ಪ ಪ್ರಮಾಣದಲ್ಲಿ ಸೇರಿಸಬೇಕು

ನಂತರದಲ್ಲಿ ಒಂದು ತಾಸು ನೆನೆಸಿಟ್ಟುಕೊಂಡ ಅಕ್ಕಿಯನ್ನು ನುಣ್ಣಗೆ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು. ನಂತರ ಆ ಎರಡನ್ನು ಸೇರಿಸಿಕೊಳ್ಳಬೇಕು

ಜಿನುಗು ರವೆಯನ್ನು ಸ್ವಲ್ಪ ಪ್ರಮಾಣದಲ್ಲಿ ಸೇರಿಸಬೇಕು. ಹೀಗೆ ಪತ್ರೊಡೆಗೆ ಬೇಕಾದ ಮಸಾಲೆಯ ಮಿಶ್ರಣ ತಯಾರಿ ಮಾಡಿಕೊಂಡಿದ್ದಾಯಿತು

ಈಗ ಕೆಸುವಿನ ಎಲೆಯ ದಂಟನ್ನು ಬೇರೆ ಮಾಡಿಕೊಳ್ಳಬೇಕು. ಹೀಗೆ ಮಾಡಿದ್ರೆ ಕೆಸುವನ್ನು ಮಡಚಲು ಸುಲಭವಾಗುತ್ತೆ. ಒಂದು ಅಗಲವಾದ ಹರಿವಾಣದಂತಹ ಈ ಕೆಸುವಿನ ಎಲೆಗೆ ಮಸಾಲೆಯನ್ನ ಪೂರ್ತಿ ಸವರಿಕೊಳ್ಳಬೇಕು

ನಂತರ ಚಿಕ್ಕ ಪುಟ್ಟ ಕೆಸುವನ್ನೂ ಮಸಾಲೆಯಲ್ಲಿ ಸೇರಿಸಿ ಅದನ್ನು ಅಗಲ ಕೆಸುವಿನ ಮೇಲೆ ಒಂದರ ಮೇಲೊಂದರಂತೆ ಹರವಿಕೊಳ್ಳಬೇಕು

ಕೆಸುವನ್ನು ಚೆನ್ನಾಗಿ ಮಡಿಚಿಕೊಂಡು ರೋಲ್ ಮಾಡಿ ಅದನ್ನು ಇಡ್ಲಿ ಪಾತ್ರೆಯಲ್ಲಿ ಬೇಯಲು ಇಡಬೇಕು. ಅಡಿಯಲ್ಲಿ ಇಡ್ಲಿ ಪಾತ್ರೆಗೆ ನೀರು ಹಾಕೋದನ್ನ ಮರೆಯಬಾರದು

ಪತ್ರೊಡೆಯನ್ನು ಇಡ್ಲಿ ಬೇಯಿಸಿದ ಹಾಗೆ ಬೇಯಿಸಬೇಕು. ಬೇಯಿಸಿದ ಕೆಸುವಿನ ಎಲೆ ಮಸಾಲೆಯೊಂದಿಗೆ ಅಂಟಿಕೊಂಡು ಹದವಾಗಿ ಬೆರೆತು ಪತ್ರೊಡೆಯಾಗಲು ಒಂದರ್ಧ ತಾಸು ಸಾಕು

ನಂತರ ಟೀ ಜೊತೆಗೆ ಪತ್ರೊಡೆಯನ್ನು ರವಾ ಫ್ರೈ ಮಾಡಿಕೊಂಡು ತಿಂದು ಖುಷಿ ಪಡಬಹುದು