ಬೆಂಗಳೂರಿನ ಲಾಲ್‍ಬಾಗ್ ಫ್ಲವರ್ ಶೋಗೆ ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಿದ್ದು, ಹೂವುಗಳು ಎಲ್ಲರ ಕಣ್ಮನ ಸೆಳೆಯುತ್ತಿವೆ.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 4 ರಿಂದ ಫ್ಲವರ್ ಶೋ ಆರಂಭವಾಗಿದೆ.

ಬೆಂಗಳೂರಿನ ಹೂಗಳ ಹಬ್ಬ ಲಾಲ್‍ಬಾಗ್ ಫ್ಲವರ್ ಶೋ ಶುರುವಾಗಿದೆ. ಬಗೆ ಬಗೆ ಹೂವುಗಳು ಜನರ ಕಣ್ಮನ ಸೆಳೆಯುತ್ತಿವೆ.

ಈ ಫ್ಲವರ್ ಶೋ ಆಗಸ್ಟ್ 15ರವರೆಗೆ ಅಂದ್ರೆ ಒಟ್ಟು 12 ದಿನಗಳವರೆಗೆ ನಡೆಯಲಿದೆ.

ಈ ಬಾರಿ 214 ನೇ ಫಲಪುಷ್ಪ ಪ್ರದರ್ಶನ ಇರಲಿದ್ದು, ವಿಧಾನಸೌಧ ಹಾಗೂ ಕೆಂಗಲ್ ಹನುಮಂತಯ್ಯ ಅವರ ಥೀಮ್‍ನಲ್ಲಿ ಇದೆ.

ಈ ಬಾರಿ ಫ್ಲವರ್ ಶೋಗೆ 2 ಕೋಟಿ ಅಧಿಕ ವೆಚ್ಚ ತಗುಲಿದೆಯಂತೆ.

ಲಾಲ್ ಬಾಗ್ ಶುಚಿತ್ವದ ಉದ್ಯಾನವನ. 140 ಎಕರೆ ವಿಸ್ತಿರ್ಣ ಇರೋ ಉದ್ಯಾನ, ಇಲ್ಲಿ ಎಲ್ಲ ಮರಗಿಡಗಳು ಇವೆ.

ಫಲಪುಷ್ಪ ಪ್ರದರ್ಶನದಲ್ಲಿ ಹಲವು ಕಲೆಗಳ ಸಾರುವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಕ್ಕಳಿಗೆ, ಮಹಿಳೆಯರಿಗೂ ಕಾರ್ಯಕ್ರಮಗಳು ಇರಲಿವೆ.

ಒಟ್ಟು4 ಗೇಟ್‍ಗಳಲ್ಲಿ ಜನರಿಗೆ ಎಂಟ್ರಿ ನೀಡಲಾಗುತ್ತೆ. ಈ ಬಾರಿ ಟಿಕೆಟ್ ದರ ಜಾಸ್ತಿ ಇಲ್ಲ.

ವೀಕ್ ಡೇಸ್‍ನಲ್ಲಿ ಹಿರಿಯರಿಗೆ 70 ರೂಪಾಯಿ ಹಾಗೂ ಮಕ್ಕಳಿಗೆ 30 ರೂಪಾಯಿ ನಿಗದಿ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗಿದೆ .