ನೀಲಿ ಬಣ್ಣದ ಚಿಟ್ಟೆಯಾದ ಶಾರುಖ್ ಮಗಳು!

ನೀಲಿ ಬಣ್ಣದ ಚಿಟ್ಟೆಯಾದ ಶಾರುಖ್ ಮಗಳು!

ಶಾರುಖ್ ಖಾನ್ ಹಾಗೂ ಗೌರಿ ಖಾನ್ ಅವರ ಪುತ್ರಿ ಸುಹಾನಾ ಖಾನ್ ಆಗಾಗ ಸುದ್ದಿಯಾಗುತ್ತಾರೆ

ಸುಹಾನಾ ಖಾನ್ ಇದೀಗ ಚಂದದ ನೀಲಿ ಬಣ್ಣದ ಸೀರೆ ಉಟ್ಟು ಕಾಣಿಸಿಕೊಂಡಿದ್ದಾರೆ

ಬಾಲಿವುಡ್ ನಿರ್ದೇಶಕ ಅನುರಾಗ್ ಕಷ್ಯಪ್ ಮಗಳು ಆಲಿಯಾ ಕಷ್ಯಪ್ ನಿಶ್ಚಿತಾರ್ಥ ಪಾರ್ಟಿಯಾಲ್ಲಿ ಸುಹಾನಾ ಖಾನ್ ಭಾಗವಹಿಸಿದರು

ಕಾರ್ಯಕ್ರಮಕ್ಕೆ ರಾಯಲ್ ಬ್ಲ್ಯೂ ಸೀರೆ ಉಟ್ಟುಕೊಂಡು ಬಂದ ನಟಿ ಹೈಲೈಟ್ ಆಗಿದ್ದಾರೆ 

ಈ ಸೀರೆಯ ಲುಕ್ ಯೇ ಜವಾನಿ ಹೇ ದಿವಾನಿ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರ ನೈನಾ ತಲ್ವಾರ್ ಸೀರೆ ಲುಕ್ ಹೋಲುತ್ತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ

ನಟಿ ಸುಹಾನಾ ರಾಯಲ್ ಬ್ಲ್ಯೂ ಬಣ್ಣದ ಫ್ಯಾನ್ಸಿ ಸೀರೆ ಉಟ್ಟುಕೊಂಡು ತುಂಬಾ ಮುದ್ದಾಗಿ ಕಾಣಿಸಿದ್ದಾರೆ

ಸುಹಾನಾ ಸೀರೆಗೆ ಮ್ಯಾಚ್ ಆಗುವಂತೆ ನೀಲಿ ಬಣ್ಣದ ಬಿಂದಿ ಇಟ್ಟುಕೊಂಡಿದ್ದರು

ನಟಿ ನೀಲಿ ಬಣ್ಣದ ಮ್ಯಾಚಿಂಗ್ ಪೌಚ್ ಹಿಡಿದು ತಮ್ಮ ಲುಕ್ ಕಂಪ್ಲೀಟ್ ಆಗುವಂತೆ ಮಾಡಿದ್ದರು 

ಸುಹಾನಾ ಖಾನ್ ಅವರ ಫೊಟೋಸ್ ಈಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ