ಊಟದ ನಂತರದ ವಾಕಿಂಗ್, ವ್ಯಾಯಾಮಗಳನ್ನು ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು

ದೇಹಕ್ಕೆ ವ್ಯಾಯಾಮ ಬಹಳ ಮುಖ್ಯ. ದೇಹದಲ್ಲಿನ ಮೂಳೆಗಳು ಮತ್ತು ಸ್ನಾಯುಗಳನ್ನು ಆರೋಗ್ಯಕರವಾಗಿಡಲು ಸಾಕಷ್ಟು ದೈಹಿಕ ವ್ಯಾಯಾಮಗಳು ಅವಶ್ಯಕ

ಅದರಲ್ಲಿಯೂ ನಾವು ಯಾವ ಸಮಯದಲ್ಲಿ ವಾಕಿಂಗ್ ಮತ್ತು ವ್ಯಾಯಾಮ ಮಾಡುತ್ತೇವೆ ಎಂಬುವುದು ಕೂಡ ಅಷ್ಟೇ ಮುಖ್ಯ

ಬೆಳಗ್ಗೆ ವ್ಯಾಯಾಮ ಮಾಡುವುದರಿಂದ ದಿನವಿಡೀ ಉಲ್ಲಾಸದಾಯಕವಾಗಿರಲು ಸಹಾಯ ಮಾಡುತ್ತದೆ

ಸಂತೋಷದ ಹಾರ್ಮೋನ್ಗಳನ್ನು ಹೆಚ್ಚಿಸುತ್ತೆ: ವ್ಯಾಯಾಮ ಅಥವಾ ವಾಕಿಂಗ್ಗೆ ಹೋಗುವುದರಿಂದ ಸಾಮಾನ್ಯವಾಗಿ ದೇಹದಲ್ಲಿ ಸಂತೋಷದ ಹಾರ್ಮೋನ್ಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ತಿಂದ ತಕ್ಷಣ ನಿದ್ರೆಗೆ ಮಾಡುವುದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ತೂಕವನ್ನು ಹೆಚ್ಚಿಸುತ್ತದೆ

ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತೆ: ರಾತ್ರಿಯ ಊಟದ ಬಳಿಕ ವಾಕ್ ಮಾಡುವುದು ಸಂತೋಷದ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ

ಹಸಿವನ್ನು ನಿಗ್ರಹಿಸಲು ಸಹಾಯ ಮಾಡುತ್ತೆ: ರಾತ್ರಿ ಊಟದ ನಂತರ ವಾಕಿಂಗ್ ಮಾಡುವುದು ನಿಮ್ಮನ್ನು ಸುಸ್ತಾಗಿಸುತ್ತದೆ ಮತ್ತು ನಿದ್ರೆ ಪಡೆಯಲು ನಿಮ್ಮನ್ನು ಸಿದ್ಧಗೊಳಿಸುತ್ತದೆ

ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತೆ: ತಿನ್ನುವ ಮತ್ತು ಮಲಗುವ ಸಮಯದಲ್ಲಿ ಕೊಬ್ಬುಗಳು ಸಂಗ್ರಹವಾಗುತ್ತವೆ ಮತ್ತು ತೂಕ ಹೆಚ್ಚಾಗಲು ಕಾರಣವಾಗುತ್ತವೆ

ಹೃದಯದ ಆರೋಗ್ಯವನ್ನು ಸುಧಾರಿಸುತ್ತೆ: ನಿಯಮಿತ ವ್ಯಾಯಾಮದ ಮುಖ್ಯ ಪ್ರಯೋಜನವೆಂದರೆ ಉತ್ತಮ ರಕ್ತ ಪರಿಚಲನೆ. ಇದಲ್ಲದೇ, ರಾತ್ರಿ ಊಟದ ನಂತರ ವಾಕಿಂಗ್ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ