ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಆಧರಿಸಿ ಅಡುಗೆ ಮಾಡೋ ಮಷಿನ್ ಬಂದಿದೆ.
ನಾನ್ ವೆಜ್ ಅಡುಗೆಯನ್ನೂ ಮಾಡುವ ಎಐ ಮಷಿನ್ ತಯಾರಿಸಿದ ಬೆಂಗಳೂರಿನ ಕಂಪನಿ!
ಬರೋಬ್ಬರಿ 250ಕ್ಕೂ ಹೆಚ್ಚು ವಿಧದ ರುಚಿಯಾದ ಖಾದ್ಯಗಳನ್ನ ತಯಾರಿಸಿ ನಿಮ್ಮೆದುರು ಇಡುತ್ತೆ.
ಸದ್ಯ ಗಂಡಸರೇ ಹೆಚ್ಚಾಗಿ ಈ ಮಷಿನ್ ಬಳಕೆ ಮಾಡ್ತಿದ್ದಾರೆ.
ಪ್ರತೀ ಶುಕ್ರವಾರ ಹೊಸ ರುಚಿಯೊಂದನ್ನು ಕಲಿಯುತ್ತೆ ಎಐ ಅಡುಗೆ ಮಷಿನ್.
Fill in some text
ನೀವು ವೆಜ್ ಅಥವಾ ನಾನ್ ವೆಜ್ ಎಂಬುದನ್ನ ತಿಳಿದುಕೊಂಡೇ ರೆಸಿಪಿಗಳನ್ನು ತೆರೆದಿಡುತ್ತದೆ.
ಚಿಲ್ಲಿ ಗಾರ್ಲಿಕ್ ನೂಡಲ್ಸ್ ಮಾಡಲು ಈ ಮಷಿನ್ ಗೆ 20 ನಿಮಿಷ ಬೇಕಾದ್ರೆ, ಟೊಮೆಟೊ ಗ್ರೇವಿಯನ್ನಂತೂ 14 ನಿಮಿಷಕ್ಕೆ ರೆಡಿಮಾಡಿ ಕೊಡುತ್ತೆ.
ಒಂಟಿಯಾಗಿರುವವರಿಗೆ, ಇಡೀ ದಿನ ಕೆಲಸ ಅಂತ ಕಳೆದೋಗುವವರಿಗಂತೂ ಈ ಮಷಿನ್ ತುಂಬಾ ಹೆಲ್ಪ್ ಆಗುವಂತಿದೆ.
ಅಂದಹಾಗೆ ಈ ಮಷಿನ್ ಬೆಲೆ ಸದ್ಯ 21,999 ರೂಪಾಯಿ.
ನಿಮಗೂ ಅಡುಗೆ ಮಾಡಲು ಆಲಸ್ಯ ಇದ್ರೆ ಒಮ್ಮೆ ಟ್ರೈ ಮಾಡಬಹುದು!