ಜಿಲೇಬಿ ತಿನ್ನಬೇಕು ಅನಿಸಿದಾಗ ಅನೇಕ ಮಂದಿ ಸ್ವೀಟ್ ಅಂಗಡಿ, ಬೇಕರಿಯನ್ನು ಹುಡುಕಿಕೊಂಡು ಹೊರಗೆ ಹೋಗಿ ಜಿಲೇಬಿಯನ್ನು ತಿನ್ನುತ್ತಾರೆ

ಆದರೆ ಇನ್ಮುಂದೆ ಹೊರಗೆ ಹೋಗುವ ಅಗತ್ಯವಿಲ್ಲ. ಏಕೆಂದರೆ ನಾವಿಂದು ಮನೆಯಲ್ಲಿಯೇ ಸುಲಭವಾಗಿ ಜಿಲೇಬಿಯನ್ನು ಮಾಡುವುದು ಹೇಗೆ ಎಂದು ತಿಳಿಸುತ್ತೇವೆ

ಜಿಲೇಬಿ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಜಿಲೇಬಿ ಎಂದಾಕ್ಷಣ ಬಾಯಿಯಲ್ಲಿ ನೀರು ಬರುತ್ತದೆ

ಅದ್ರಲ್ಲೂ ಮಳೆಗಾಲದಲ್ಲಿ ಗರಿ ಗರಿಯಾಗಿರುವ ಬಿಸಿ-ಬಿಸಿ ಜಿಲೇಬಿ ತಿನ್ನಬೇಕಾದರೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಅನಿಸುತ್ತದೆ

ಜಿಲೇಬಿ ಮಾಡಲು ಬೇಕಾಗುವ ಸಾಮಾಗ್ರಿಗಳು: ಮೈದಾ - 1/2 ಕೆಜಿ, ಸಕ್ಕರೆ - 1 ಬಟ್ಟಲು, ಕೇಸರಿ - ಸ್ವಲ್ಪ, ಏಲಕ್ಕಿ ಪುಡಿ - ಕಾಲು ಚಮಚ, ದೇಸಿ ತುಪ್ಪ, ಕರಿಯಲು ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು. ನೀರು - ಅರ್ಧ ಕಪ್

ಜಿಲೇಬಿ ಮಾಡುವ ವಿಧಾನ: ಮೊದಲು ಒಲೆಯ ಮೇಲೆ ಮೀಡಿಯಂ ಉರಿಯಲ್ಲಿ ಒಂದು ಪಾತ್ರೆಗೆ ಸಕ್ಕರೆ ಮತ್ತು ನೀರನ್ನು ಹಾಕಿ ಪಾಕವನ್ನು ತಯಾರಿಸಬೇಕು

ಅದಕ್ಕೆ ಏಲಕ್ಕಿ ಪುಡಿ, ಕೇಸರಿ ದಳಗಳನ್ನು ಹಾಕಿ ಒಂದೆಳೆ ಪಾಕವನ್ನು ಮಾಡಿ ಮುಚ್ಚಿಡಬೇಕು

ನಂತರ ಒಂದು ಅಗಲವಾದ ಬಟ್ಟಲಲ್ಲಿ ಮೈದಾ ಹಿಟ್ಟನ್ನು ಹಾಕಿ, ಅದಕ್ಕೆ ದೇಸಿ ತುಪ್ಪವನ್ನು ಹಾಕಿ ಮಿಕ್ಸ್ ಮಾಡಬೇಕು. ಜೊತೆಗೆ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿ ಗಟ್ಟಿಯಾಗಿ ದೋಸೆ ಹಿಟ್ಟಿನ ಹದಕ್ಕೆ ಚೆನ್ನಾಗಿ ಕಲೆಸಬೇಕು

ಈಗ ಒಲೆಯ ಮೇಲೆ ಮೀಡಿಯಂ ಉರಿಯಲ್ಲಿ ಎಣ್ಣೆಯನ್ನು ಕಾಯಲು ಇಡಬೇಕು. ನಂತರ ಜಿಲೇಬಿ ಮಾಡುವ ಪಾತ್ರೆ ಅಥವಾ ಒಂದು ಪ್ಲಾಸ್ಟಿಕ್ ಕವರ್ ಅನ್ನು ಕೋನ್ ರೀತಿಯಾಗಿ ಮಾಡಿ

ತುದಿಯಲ್ಲಿ ಸಣ್ಣದಾಗಿ ಕಟ್ ಮಾಡಿ ಕಾದ ಎಣ್ಣೆಯಲ್ಲಿ ಜಿಲೇಬಿ ಆಕಾರದಲ್ಲಿ ಒತ್ತಿ ಎರಡೂ ಕಡೆ ಒಂದು ನಿಮಿಷ ಬೇಯಿಸಬೇಕು

ನಂತರ ಅದನ್ನು ತೆಗೆದು ಈಗಾಗಲೇ ಸಿದ್ಧವಾದ ಸಕ್ಕರೆ ಪಾಕದಲ್ಲಿ ಅದ್ದಿ 5 ನಿಮಿಷ ನೆನೆಯಲು ಬಿಡಬೇಕು. ಹೀಗೆ ಜಿಲೇಬಿ ತಯಾರಿಸಿ ಮೊಸರಿನ ಜೊತೆಗೆ ಸವಿಯಬಹುದು