ಕಾಂತಾರದ ಪಂಜುರ್ಲಿಯಂತೆ ಸಿರಿ ಸಿಂಗಾರ, ಬಾದಾಮಿ ಚಾಲುಕ್ಯರ ಅಧಿದೇವತೆಗೆ ಸೊಬಗಿನ ಬಿನ್ನಾಣ

ಭಕ್ತರ ಗಮನ ಸೆಳೆಯಿತು ನೋಡಿ ಬನಶಂಕರಿ ದೇವಿಯ ಅಲಂಕಾರ

ಉತ್ತರ ಕರ್ನಾಟಕದ ಶಕ್ತಿ ದೇವತೆ ಬಾದಾಮಿಯ ಬನಶಂಕರಿಗೂ, ತುಳುನಾಡಿನ ಪಂಜುರ್ಲಿಗೂ ಅದೇನ್‌ ಸಂಬಂಧ ಅಂತೀರ?

ಅಧಿಕ ಮಾಸ ಇರುವುದರಿಂದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಶಂಕರಿದೇವಿ ದರ್ಶನಕ್ಕೆ ಲಕ್ಷಾಂತರ ಜನ ಭಕ್ತರು ಆಗಮಿಸುತ್ತಿದ್ದಾರೆ

ಈ ನಿಟ್ಟಿನಲ್ಲಿ ಬನಶಂಕರಿಯ ಅಲಂಕಾರದಲ್ಲಿ ಕಾಂತಾರದ ಪಂಜುರ್ಲಿಯಂತೆ ಸಿರಿ ಸಿಂಗಾರ ಮಾಡಲಾಗಿತ್ತು

ಮಂಗಳವಾರ, ಶುಕ್ರವಾರ ಹಾಗೂ ಭಾನುವಾರವಂತೂ ದೇವಿಯ ದಿನವಾಗಿದ್ದು, ಅಂದು ಭಕ್ತರು ಪೂಜೆ ಸಲ್ಲಿಸುವ ಮೂಲಕ ಕೃತಾರ್ಥರಾಗುತ್ತಾರೆ

ಇನ್ನು ದೇವಿಯ ಅಲಂಕಾರವೂ ಈ ಸಮಯದಲ್ಲಿ ವಿಶಿಷ್ಟವಾಗಿ ಕಂಗೊಳಿಸುತ್ತದೆ. ಈ ಬಾರಿ ತುಳುನಾಡಿನ ದೈವದ ಅಲಂಕಾರವನ್ನ ಮಾಡುವ ಮೂಲಕ ಉತ್ತರ ಕರ್ನಾಟಕ ಅಧಿದೇವತೆ ಕಂಗೊಳಿಸುವಂತೆ ಮಾಡಲಾಯಿತು

ಈ ದೇವಾಸ್ಥಾನ ಬಾದಾಮಿ ಪಟ್ಟಣದಿಂದ 5 ಕಿಲೋಮೀಟರ್ ದೂರದಲ್ಲಿದೆ

ಬಾದಾಮಿಯಿಂದ ಬನಶಂಕರಿ ದೇವಸ್ಥಾನವನ್ನು ತಲುಪಲು ಧಾರಾಳ ಸಾರಿಗೆ ವ್ಯವಸ್ಥೆಯೂ ಇದೆ

ಒಟ್ಟಿನಲ್ಲಿ ಬನಶಂಕರಿ ದೇವಾಲಯವು ಈ ಬಾರಿ ಕರಾವಳಿಯ ಆರಾಧ್ಯ ದೈವ ಪಂಜುರ್ಲಿಯ ಸಿಂಗಾರ ತೊಟ್ಟು ಭಕ್ತರಿಗೆ ವಿಶೇಷ ದರ್ಶನ ನೀಡಿದ್ದು ವಿಶೇಷ