ತ್ವಚೆಗೆ ಮಾತ್ರವಲ್ಲ, ಉದರ ಸಂಬಂಧಿ ಕಾಯಿಲೆಗೂ ಅಲೋವೆರಾ ಬೆಸ್ಟ್!

ಉದರ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ ಅಲೋವೆರಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ

ಹೊಟ್ಟೆ ಸಂಬಂಧಿ ಸಮಸ್ಯೆಗಳಿಗೆ ಅಲೋವೆರಾವನ್ನು ಹೇಗೆ ಬಳಸಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ 

ನೀರಿನೊಂದಿಗೆ ಅಲೋವೆರಾ ಸೇರಿಸಿ ಚೆನ್ನಾಗಿ ಕುದಿಸಿ, ಶೋಧಿಸಿ ಇಂಗು ಬೆರೆಸಿ ಕುಡಿದರೆ  ಹೊಟ್ಟೆ ನೋವು ನಿವಾರಣೆಯಾಗುತ್ತದೆ

ಹೊಟ್ಟೆಯಲ್ಲಿ ಕಾಣಿಸಿಕೊಳ್ಳುವ ಗಡ್ಡೆಯ ಸಮಸ್ಯೆಯನ್ನು ಸಹ ಅಲೋವೆರಾ ಕಡಿಮೆ ಮಾಡುತ್ತದೆ

ಅಲೋವೆರಾ ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ

ಅಲೋವೆರಾ ತಿರುಳಿಗೆ ತುಪ್ಪ, ಅಳಲೆ ಕಾಯಿ ಪುಡಿ ಮತ್ತು ಕಲ್ಲು ಉಪ್ಪು ಸೇರಿಸಿ ಆ ಮಿಶ್ರಣ ಸೇವಿಸಿದ್ರೆ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ

ಅಲೋವೆರಾ ಜ್ಯೂಸ್ ನ್ನು ನಿಯಮಿತವಾಗಿ ಸೇವನೆ ಮಾಡೋದ್ರಿಂದ ನಿಮ್ಮ ಜೀರ್ಣಕ್ರಿಯೆ ಸರಾಗವಾಗುತ್ತದೆ

ಅಲೋವೆರಾ ನಮ್ಮ ದೇಹವನ್ನು ಡಿಟಾಕ್ಸ್ ಮಾಡಲು ಸಹಾಯ ಮಾಡುತ್ತದೆ

ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಅಲೋವೆರಾ ಸಹಾಯ ಮಾಡುತ್ತದೆ