ಈ ದರ್ಗಾದಲ್ಲಿ ಕನ್ನಡದಲ್ಲೇ ಪ್ರಾರ್ಥನೆ!
ಮಸೀದಿ ದರ್ಗಾಗಳೆಂದರೆ ಅಲ್ಲಿ ನಡೆಯುವ ಉರ್ದು ಭಾಷೆಗೆ ಮಾತ್ರ ಆದ್ಯತೆ ನೀಡುವುದು ಸಹಜ
ಆದರೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಸಮೀಪದ ಬೆಳಲೆ ಗೇಟ್ ಬಳಿ ಇರುವ ಹಜರತ್ ಸೈದಾನಿ ಬೀಬಿಮಾ ದರ್ಗಾ ಇದಕ್ಕೆ ತದ್ವಿರುದ್ಧವಾಗಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಿದೆ
ಪ್ರತಿ ಗುರುವಾರ ಎಂಟರಿಂದ ಒಂಬತ್ತು ಗಂಟೆವರೆಗೆ ಇಲ್ಲಿ ನಡೆಯುವ ಪ್ರಾರ್ಥನೆ ಶುಭ ಸಂದೇಶ
ಸಾಮೂಹಿಕ ಪ್ರಾರ್ಥನೆಯ ಕಾರ್ಯಕ್ರಮಗಳೆಲ್ಲವೂ ಕನ್ನಡಮಯವಾಗುತ್ತವೆ
ಈ ದರ್ಗಾಗೆ ನೂರಾರು ವರ್ಷಗಳ ಇತಿಹಾಸವಿದೆ
ದರ್ಗಾದ ಗುರುಗಳಾದ ಶಂಸುದ್ದೀನ್ ಝರಿ ಕಾಜೂರ್ ಕನ್ನಡದಲ್ಲಿ ಶುಭ ಸಂದೇಶ ನೀಡುವ ಮೂಲಕ ಭಾಷಾ ಪ್ರೇಮ ಮೆರೆಯುತ್ತಾರೆ
ಸಮರಸ್ಯ ಭಾವೈಕ್ಯತೆ ಹಾಗೂ ಭಾಷಾ ಅಭಿಮಾನದಿಂದ ಕೊಡಿರುತ್ತದೆ
ಈ ದರ್ಗಾಗೆ ಧರ್ಮ ಮತ್ತು ಜಾತಿ ಮೀರಿದ ಭಕ್ತರಿದ್ದಾರೆ
ಜಾತಿ ಭೇದವಿಲ್ಲದೇ ಎಲ್ಲರೂ ಇಲ್ಲಿ ಪ್ರಾರ್ಥನೆ ಮಾಡಿ ಕಷ್ಟಗಳನ್ನು ಪರಿಹರಿಸಿಕೊಳ್ಳಲಿ ಎಂಬ ಉದ್ದೇಶದಿಂದ ಕನ್ನಡದಲ್ಲಿ ಪ್ರಾರ್ರ್‍ಥನೆ ಮಾಡಲು ಮುಂದಾಗಿದ್ದಾರೆ