ವೇದಿಕೆ ಮೇಲೆ ಸೀರೆ ಸೆರಗು ಬಿಚ್ಚಿದ ಖ್ಯಾತ ನಟಿ, ಹೀರೋಯಿನ್‌ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್

ವೇದಿಕೆ ಮೇಲೆಯೇ ಹಾಡಿಗಾಗಿ ಸೀರೆ ಸೆರಗನ್ನು ತೆಗೆದು ನೃತ್ಯ ಮಾಡಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ.

ಪಬ್ಲಿಸಿಟಿಗಾಗಿ ಇಷ್ಟೆಲ್ಲಾ ಮಾಡಬೇಕಾ ಎಂದು ನೇಹಾ ಅಭಿಮಾನಿಗಳು ಮತ್ತು ನೆಟ್ಟಿಗರು ನಟಿಯ ವಿರುದ್ಧ ಆಕ್ರೋಶಗೊಂಡಿದ್ದಾರೆ.

ಇಂದಿನ ಸಿನಿಮಾ ತಾರೆಯರು ಸಿನಿಮಾ ಪ್ರಚಾರಕ್ಕೆ ಕೆಲವೊಮ್ಮೆ ಏನಾದರೂ ಸರಿ ಮಾಡಲು ಸಿದ್ಧರಿರುತ್ತಾರೆ.

'ಗ್ಯಾಂಗ್ಸ್ ಆಫ್ ಗೋದಾವರಿ' ಚಿತ್ರದಲ್ಲಿ ನಟ ವಿಶ್ವಕ್ ಸೇನ್ ಮತ್ತು ನಟಿ ನೇಹಾ ಶೆಟ್ಟಿ ನಟಿಸುತ್ತಿದ್ದಾರೆ.

ಚಿತ್ರದ ಪ್ರಚಾರದ ಭಾಗವಾಗಿ ಹೈದರಾಬಾದ್‌ನ ಮಲ್ಲಾರೆಡ್ಡಿ ಕಾಲೇಜಿನಲ್ಲಿ ಚಿತ್ರತಂಡ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಿತು.

ಈ ಕಾರ್ಯಕ್ರಮದಲ್ಲಿ ವಿಶ್ವಕ್ ಸೇನ್ ಜೊತೆಗೆ ನಾಯಕಿ ನೇಹಾ ಶೆಟ್ಟಿ ಸಹ ಭಾಗವಹಿಸಿದ್ದರು.

ಈ ವೇಳೆ ನೇಹಾ ತನ್ನ ಸೀರೆಯಲ್ಲಿ ವಿಶ್ವಕ್ ಅವರನ್ನು ಸುತ್ತಿದರು.

ನೇಹಾ ಶೆಟ್ಟಿ ಮೂಲತಃ ಮಂಗಳೂರು ಮೂಲದ ಕನ್ನಡದ ನಟಿಯಾಗಿದ್ದಾರೆ.

ಕನ್ನಡದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಜೊತೆ 2016ರಲ್ಲಿ ಬಿಡುಗಡೆಯಾದ ಮುಂಗಾರು ಮಳೆ 2 ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು.