ಮೈಸೂರು ಶಕ್ತಿಧಾಮದಲ್ಲಿ ಶಿವಣ್ಣ! ಸ್ವಾತಂತ್ರ್ಯೋತ್ಸದ ವಿಡಿಯೋ ವೈರಲ್

ಶಿವರಾಜ್ ಕುಮಾರ್ ಮೊನ್ನೆ ಶಕ್ತಿಧಾಮದಲ್ಲಿ ಸ್ವತಂತ್ರ ದಿನವನ್ನ ಆಚರಿಸಿದ್ದಾರೆ.

ಈ ಕ್ಷಣದ ಒಂದು ವಿಶೇಷ ವಿಡಿಯೋವನ್ನ ಸ್ವತಃ ಶಿವಣ್ಣ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.

ಶಕ್ತಿಧಾಮದ ಮಕ್ಕಳ ಜೊತೆಗೆ ಶಿವಣ್ಣ ಸ್ವತಂತ್ರ ದಿನ ಸೆಲೆಬ್ರೇಟ್ ಮಾಡಿದ್ದಾರೆ.

ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಹುಟ್ಟುಹಾಕಿರೋ ಈ ಶಕ್ತಿಧಾಮದಲ್ಲಿ ಹೆಣ್ಣುಮಕ್ಕಳೇ ಇರೋದು.

ಈ ಒಂದು ಜಾಗ ರಾಜ್ ಫ್ಯಾಮಿಲಿಗೆ ನಿಜಕ್ಕೂ ಒಂದು ವಿಶೇಷವಾದ ಜಾಗವೇ ಆಗಿದೆ.

ಗೀತಾ ಶಿವರಾಜ್‌ಕುಮಾರ್ ಅವರ ಹೊಸ ಕಲ್ಪನೆಯಿಂದಲೇ ಇಲ್ಲಿ ಬೇಕಿಂಗ್ ಕೋರ್ಸ್ ಕೂಡ ಶುರು ಆಗಿದೆ.

ಇಡೀ ಸ್ವತಂತ್ರ ದಿನದ ಆಚರಣೆಯನ್ನ ಕೂಡ ಇಲ್ಲಿ ಅಷ್ಟೆ ಸ್ಪೆಷಲ್ ಆಗಿಯೇ ಆಚರಿಸಿಲಾಗಿದೆ.

ಶಕ್ತಿಧಾಮದ ಹೆಣ್ಣುಮಕ್ಕಳು ಇಲ್ಲಿ ಫ್ಯಾನ್ಸಿ ಡ್ರೆಸ್ ಮೂಲಕ ಕಾಣಿಸಿಕೊಂಡಿದ್ದಾರೆ.

ಪರೇಡ್ ಮೂಲಕ ಶಿವರಾಜ್‌ಕುಮಾರ್-ಗೀತಾ ದಂಪತಿಗೆ ಗೌರವ ಸಲ್ಲಿಸಿದ್ದಾರೆ. ರಂಗೋಲಿಯಲ್ಲಿ ಭಾರತ ದೇಶದ ನಕ್ಷೆ ಬಿಡಿಸಿದ್ದಾರೆ.