ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೂ Namma Metro!

ನಮ್ಮ ಮೆಟ್ರೋ ಯೋಜನೆಯು ರಾಜಧಾನಿಯ ಮಹಾನಗರದಲ್ಲಿ ಭಾರೀ ಉತ್ತಮ ಸೇವೆಯನ್ನ ಒದಗಿಸುತ್ತಿದೆ

ದಿನವೊಂದಕ್ಕೆ ಲಕ್ಷಾಂತರ ಮಂದಿ ಈ ಸೇವೆಯನ್ನು ಅನುಭವಿಸುತ್ತಿದ್ದಾರೆ

2011ರಲ್ಲಿ ಆರಂಭವಾದ ಮೆಟ್ರೋ ಸೇವೆಯನ್ನು ಅನಂತರದ ದಿನಗಳಲ್ಲಿ ಮತ್ತಷ್ಟು ವಿಸ್ತರಿಸಲಾಗಿತ್ತು

ಇದೀಗ ಈ ವರ್ಷಾಂತ್ಯಕ್ಕೆ ಮತ್ತೊಂದು ಹೆಚ್ಚುವರಿ ಮೆಟ್ರೋ ಮಾರ್ಗವು ಸಂಚಾರಕ್ಕೆ ಮುಕ್ತವಾಗಲಿದೆ

ಇದೀಗ ಬೆಂಗಳೂರು ನಗರವಷ್ಟೇ ಅಲ್ಲದೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ಕೂಡ ಮೆಟ್ರೋ ಸೇವೆಯ ವಿಸ್ತರಣೆ ನಡೆಸಬೇಕೆನ್ನುವ ಒತ್ತಾಯ ಕೇಳಿ ಬಂದಿದೆ

ಮುಖ್ಯಮಂತ್ರಿ ಅವರ ಸಭೆಯಲ್ಲಿಯೇ ಇಂತಹ ಪ್ರಸ್ತಾವನೆ ಕೇಳಿ ಬಂದಿದೆ

ಶಾಸಕರು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಸಿಎಂ ಸಿದ್ದರಾಮಯ್ಯ ಕೂಡಾ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ

ವಿಶೇಷವಾಗಿ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ ಹಾಗೂ ಹೊಸಕೋಟೆ ಭಾಗಗಳಿಗೆ ಮೆಟ್ರೋ ವಿಸ್ತರಣೆ ನಡೆಸುವುದರ ಬಗ್ಗೆ ಚರ್ಚೆ ನಡೆದಿದೆ

ಇದರಿಂದಾಗಿ ಬೆಂಗಳೂರು ನಗರಕ್ಕೆ ಹೊಂದಿಕೊಂಡಂತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖ ಪಟ್ಟಣಗಳಿಗೂ ಈ ಸೇವೆ ಮುಂದುವರೆಸುವ ಯೋಚನೆಯನ್ನ ಸರಕಾರ ಕೈಗೆತ್ತಿಕೊಂಡಿದೆ