Kriti Kharbanda ಬೆಡ್ ರೂಮ್‍ನಲ್ಲಿ ಸೀಕ್ರೆಟ್ ಕ್ಯಾಮೆರಾ!

ಗೂಗ್ಲಿ ನಟಿ ಕೃತಿ ಕರಬಂದ ಅವರ ಬೆಡ್​ರೂಮ್​ನಲ್ಲಿ ಹಿಡನ್ ಕ್ಯಾಮೆರಾ ಪತ್ತೆಯಾಗಿದೆ

ನಟಿ ಕೃತಿ ಕರಬಂದ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಶೂಟಿಂಗ್‌ಗಾಗಿ ಹೋಟೆಲ್‌ನಲ್ಲಿ ತಂಗಿದ್ದಾಗ ಹಿಡನ್ ಕ್ಯಾಮೆರಾ ಕಂಡು ಬೆಚ್ಚಿಬಿದ್ದಿದ್ದೇನೆ ಎಂದು ಹೇಳಿದ್ದಾರೆ

ಕನ್ನಡ ಸಿನಿಮಾವೊಂದರ ಶೂಟಿಂಗ್ ಗಾಗಿ ಬೆಂಗಳೂರಿಗೆ ಹೋದಾಗ ನಡೆದ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ

ಅಲ್ಲಿ ತಂಗಿದ್ದ ಹೋಟೆಲ್ ರೂಮ್ ನಲ್ಲಿ ಸ್ವಲ್ಪ ಎಚ್ಚರ ತಪ್ಪಿದ್ದರೆ ಏನಾಗುತ್ತಿತ್ತು ಎಂದು ರಿವೀಲ್ ಮಾಡಿದ್ದಾರೆ

ಶೂಟಿಂಗ್‌ಗಾಗಿ ಹೊಟೇಲ್‌ನಲ್ಲಿ ತಂಗಿದ್ದಾಗ ಅಲ್ಲಿದ್ದ ಹಿಡನ್ ಕ್ಯಾಮೆರಾ ಕಂಡು ಬೆಚ್ಚಿಬಿದ್ದಿದ್ದೇನೆ ಎಂದು ಹಂಚಿಕೊಂಡಿದ್ದಾರೆ

ಈ ವಿಚಾರ ಎಲ್ಲರಿಗೂ ಶಾಕ್ ಕೊಟ್ಟಿದೆ

ಆದರೆ ಸೆಲೆಬ್ರಿಟಿ ಲೈಫ್ ನಲ್ಲಿ ಇದು ಹೊಸ ವಿಚಾರ ಏನಲ್ಲ. ಇಂಥಹ ಘಟನೆ ನಡೆಯುತ್ತಲೇ ಇರುತ್ತವೆ

ಸಾಮಾನ್ಯವಾಗಿ ಶೂಟಿಂಗ್ ಗೆ ಹೋಗುವಾಗ ಹೊಟೇಲ್ ನಲ್ಲಿ ಉಳಿದುಕೊಳ್ಳಬೇಕಾದರೆ ಒಮ್ಮೆ ರೂಂ ಚೆಕ್ ಮಾಡುವುದು ವಾಡಿಕೆ ಎಂದು ಕೃತಿ ಹೇಳಿದ್ದಾರೆ

ಆದರೆ ಇದು ಕೃತಿ ಮಾತ್ರವಲ್ಲ ಬಹುತೇಕ ಎಲ್ಲ ನಟಿಯರೂ ಫಾಲೋ ಮಾಡುತ್ತಾರೆ