Fill in some text

ಗರ್ಭಿಣಿಯರು ಮಂಗಳಗೌರಿ ಪೂಜೆ ಮಾಡಬಹುದಾ, ರಾಜ್ಯದ ವಿವಿಧೆಡೆ ಒಂದೊಂದು ರೀತಿ ಆಚರಣೆ

ರಾಜ್ಯದಲ್ಲಿ ಮಂಗಳಗೌರಿ ವ್ರತ ಸಂಭ್ರಮದಿಂದ ಮಾಡ್ತಾ ಇದ್ದಾರೆ. ಗರ್ಭಿಣಿಯರು ಮಂಗಳಗೌರಿ ಪೂಜೆ ಮಾಡಬಹುದಾ ಎನ್ನುವುದು ಹಲವರ ಪ್ರಶ್ನೆ. ಇಲ್ಲಿದೆ ನೋಡಿ ಮಾಹಿತಿ

ರಾಜ್ಯದಲ್ಲಿ ಮಂಗಳಗೌರಿ ವ್ರತವನ್ನು ಸಂಭ್ರಮದಿಂದ ಮಾಡ್ತಾ ಇದ್ದಾರೆ. ಗರ್ಭಿಣಿಯರು ಮಂಗಳಗೌರಿ ಪೂಜೆ ಮಾಡಬಹುದಾ ಎನ್ನುವುದು ಹಲವರ ಪ್ರಶ್ನೆ.ರಾಜ್ಯದ ವಿವಿಧೆಡೆ ಒಂದೊಂದು ರೀತಿ ಆಚರಣೆ ಮಾಡ್ತಾರೆ

ಮಂಗಳಗೌರಿ ವ್ರತದ ದಿನ ಬೆಳಗ್ಗೆ ಬೇಗ ಸ್ನಾನ ಮಾಡಿ, ಸಾಧ್ಯವಾದರೆ ಕೆಂಪು ಅಥವಾ ಹಸಿರು ಬಟ್ಟೆಗಳನ್ನು ಧರಿಸಬೇಕು

ಉಪವಾಸ ಆಚರಣೆ ಮಾಡುತ್ತಿದ್ದರೆ, ಶಿವ ಮತ್ತು ಪಾರ್ವತಿಯ ಮುಂದೆ ಕೈಜೋಡಿಸಿ ಉಪವಾಸದ ಪ್ರತಿಜ್ಞೆ ಮಾಡಬೇಕು

ಮಂಗಳಕರ ಸಮಯದಲ್ಲಿ ಮಂಗಳಗೌರಿ ವಿಗ್ರಹವನ್ನು ಅಥವಾ ಪಾರ್ವತಿಯ ಫೋಟೋ ಪ್ರತಿಷ್ಠಾಪಿಸಿ ಪೂಜಿಸಬೇಕು

ಕೆಲವರು ಅರಿಶಿನದಿಂದ ಗೌರಿ ಪ್ರತಿಮೆ ಮಾಡಿ ಪ್ರತಿಷ್ಠಾಪಿಸುತ್ತಾರೆ. ಪಕ್ಕದಲ್ಲಿಯೇ ಗಣೇಶನ ವಿಗ್ರಹವಿಟ್ಟು, ಅದಕ್ಕೂ ಪೂಜೆ ಸಲ್ಲಿಸಬೇಕು

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಹಿಳೆ ಗರ್ಭಿಣಿಯಾದ್ರೆ ಪೂಜೆ ಮಾಡಬಾರದು ಎಂದು ಹೇಳ್ತಾರೆ. ಗರ್ಭಿಣಿ ಆಗಿದ್ರೆ ಮಂಗಳಗೌರಿ ವ್ರತವನ್ನು ಮುಂದಿನ ವರ್ಷ ಮಾಡಬೇಕು ಎಂದು ಹಿರಿಯರು ಹೇಳ್ತಾರೆ

ಇನ್ನು ಕೆಲವರು, ಪತ್ನಿ ಗರ್ಭಿಣಿ ಆಗಿದ್ರೆ, ಪತಿ ಕೈನಲ್ಲಿ ಮಂಗಳಗೌರಿ ಪೂಜೆ ಮಾಡಿಸಬೇಕಂತೆ. ಯಾಕಂದ್ರೆ ವ್ರತವನ್ನು ನಿಲ್ಲಿಸಬಾರದು ಎಂಬ ಉದ್ದೇಶದಿಂದ

ಇನ್ನು ಕೆಲವೆಡೆ ಇದು ಗೌರಿ ಹಬ್ಬ. ಗೌರಿ ಹೆಣ್ಣಿನ ಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತಾಳೆ. ಗರ್ಭಿಣಿಯರು ಪೂಜೆ ಮಾಡಬಹುದು ಎಂದು ಹೇಳಿ, ಪೂಜೆ ಮಾಡ್ತಾರೆ

ಮಂಗಳಗೌರಿ ಪೂಜೆ ದಿನ ಮಹಿಳೆಯರು ಉಪವಾಸ ಇರುತ್ತಾರೆ. ಇದು ಗರ್ಭಿಣಿ ಮಹಿಳೆಯರಿಗೆ ಒಳ್ಳೆಯದಲ್ಲ ಎನ್ನುವುದು ವಿಜ್ಞಾನ ಹೇಳುತ್ತೆ. ಅದಕ್ಕೆ ಗರ್ಭಿಣಿಯರು ಪೂಜೆ ಮಾಡಲ್ಲ