ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ Ramya Krishnan?

ಹಿರಿಯ ನಾಯಕಿ ರಮ್ಯಾ ಕೃಷ್ಣನ್ ರಾಜಕೀಯ ಪ್ರವೇಶದ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ

ಈ ಹಿನ್ನೆಲೆಯಲ್ಲಿ ರಮ್ಯಾ ಕೃಷ್ಣನ್ ಇತ್ತೀಚೆಗೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ

ರಮ್ಯಾ ಕೃಷ್ಣನ್ ಅವರು ವೈಸಿಪಿ ಸೇರುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು

ಇದಕ್ಕೆ ಪ್ರಮುಖ ಕಾರಣ ವೈಸಿಪಿ ನಾಯಕಿ ಹಾಗೂ ಎಪಿ ಸಚಿವೆ ರೋಜಾ ಅವರನ್ನು ರಮ್ಯಾಕೃಷ್ಣ ಭೇಟಿ ಮಾಡಿದ್ದು

ತಿರುಮಲ ತಿರುಪತಿ ದೇವಸ್ಥಾನದಲ್ಲಿ ದರ್ಶನ ಪಡೆಯಲು ರೋಜಾ ಅವರ ಸಹಾಯವನ್ನು ತೆಗೆದುಕೊಂಡಿದ್ದೆ

ಮತ್ತು ರೋಜಾ ಅವರನ್ನು ನೋಡಿ ಬಹಳ ದಿನಗಳಾಗಿದ್ದರಿಂದ ಅವರನ್ನು ಭೇಟಿ ಮಾಡಲು ಅವರ ಮನೆಗೆ ಹೋಗಿದ್ದೆ ಅಷ್ಟೇ ಎಂದು ರಮ್ಯಾ ಕೃಷ್ಣನ್ ಹೇಳಿದರು

ಅದಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದಿದ್ದಾರೆ ರಮ್ಯಾ ಕೃಷ್ಣನ್

ಮುಂದೆ ರಾಜಕೀಯ ಸೇರುವ ಯೋಚನೆ ಇದ್ದರೆ ನಾನೇ ಘೋಷಣೆ ಮಾಡುತ್ತೇನೆ ಎಂದ ರಮ್ಯಾ ಕೃಷ್ಣನ್, ಯಾವ ಪಕ್ಷಕ್ಕೆ ಸೇರುತ್ತೇನೆ ಅನ್ನೋದನ್ನು ಕೂಡ ನಾನೇ ಹೇಳುತ್ತೇನೆ ಎಂದಿದ್ದಾರೆ

ಈ ಮೂಲಕ ರಮ್ಯಾ ಕೃಷ್ಣನ್ ರಾಜಕೀಯ ಪ್ರವೇಶದ ಸುದ್ದಿಗೆ ಬ್ರೇಕ್ ಹಾಕಿದ್ದಾರೆ