ಶಿಕ್ಷಕರ ಗ್ರಾಮವಾಗಿ ಮಾರ್ಪಟ್ಟ ಕುಗ್ರಾಮ!

ಶಿಕ್ಷಕರ ಗ್ರಾಮವಾಗಿ ಮಾರ್ಪಟ್ಟ ಕುಗ್ರಾಮ!

ಮಠಾಧೀಶರ ಒಂದು ನಿರ್ಧಾರದಿಂದ ಶಿಕ್ಷಣ ವಂಚಿತ ಕುಗ್ರಾಮದ ಚಿತ್ರಣವೇ ಬದಲು 

ಈ ಗ್ರಾಮ ಶಿಕ್ಷಕರ ತವರೂರಾಗಿ ಮಾರ್ಪಟ್ಟಿದ್ದು, ರಾಜ್ಯದಲ್ಲೆ ಅತೀ ಹೆಚ್ಚು ಶಿಕ್ಷಕರನ್ನು‌ ಹೊಂದಿರುವ ಹೆಗ್ಗಳಿಕೆ ಪಡೆದುಕೊಂಡಿದೆ

ಈ ಗ್ರಾಮ ಬೇರೆ ಯಾವುದೂ ಅಲ್ಲ, ಸವದತ್ತಿ ತಾಲೂಕಿನ ಇಂಚಲ ಗ್ರಾಮ

ಇಂಚಲ ಗ್ರಾಮ ಶಿಕ್ಷಕರ ತವರೂರಾಗಲು ಇಲ್ಲಿನ ಸಿದ್ಧಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿಯವರೇ ಕಾರಣ 

ಡಾ. ಶಿವಾನಂದ ಭಾರತಿ ಸ್ವಾಮೀಜಿ 1975ರಲ್ಲಿ ಶಿವಯೋಗಿಶ್ವರ ಪ್ರೌಢಶಾಲೆ, 1982ರಲ್ಲಿ ಪದವಿ ಪೂರ್ವ ಕಾಲೇಜು ಆರಂಭಿಸುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದರು

ಶಿವಾನಂದ ಸ್ವಾಮೀಜಿ 1986ರಲ್ಲಿ ಶ್ರೀಮಠದಿಂದ ಟಿಸಿಎಚ್ ಕಾಲೇಜು ಆರಂಭಿಸಿದರು

1988ರಿಂದ ಪ್ರತಿ ವರ್ಷವೂ ಇಲ್ಲಿ ಕಲಿತ ಸರಾಸರಿ 20ಕ್ಕೂ ಹೆಚ್ಚು ಶಿಕ್ಷಕರು ಆಯ್ಕೆಯಾಗುತ್ತಾ ಬಂದಿದ್ದಾರೆ

ಇಲ್ಲಿ ತರಬೇತಿ ಪಡೆದ 7 ಸಾವಿರ ಶಿಕ್ಷಕರ ಪೈಕಿ ಶೇ.99ರಷ್ಟು ಶಿಕ್ಷಕರು ಕಾರ್ಯನಿರ್ವಹಿಸಿದ್ದಾರೆ

1997ರ ಬ್ಯಾಚಿನಲ್ಲಿ ಕರಿಗಾರ ಮನೆತನದ ಏಳು ಶಿಕ್ಷಕರು ನೇಮಕಾತಿ ಆಗಿದ್ದು,. ಆ ವರ್ಷ ಇಂಚಲ ಗ್ರಾಮದ 50 ಜನ ಶಿಕ್ಷಕರಾಗಿ ನೇಮಕಾತಿ ಆಗಿದ್ದು ದಾಖಲೆಯಾಗಿದೆ