ಮೊಬೈಲ್ ಪಕ್ಕದಲ್ಲಿಟ್ಟುಕೊಂಡು ಮಲಗುವುದು ಹಾನಿಕಾರಕ ಅಭ್ಯಾಸವಾಗಿದ್ದು ಇದು ನಿದ್ರಾಹೀನತೆ ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ
2020 ರ ಅಧ್ಯಯನದ ಪ್ರಕಾರ, ನಾಲ್ಕು ವಾರಗಳವರೆಗೆ ಮಲಗುವ ಮುನ್ನ ಫೋನ್ ಬಳಕೆಯನ್ನು ಕಡಿಮೆ ಮಾಡುವುದರಿಂದ ನಿದ್ರೆಯ ಗುಣಮಟ್ಟ, ಅವಧಿ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ
ಇದಲ್ಲದೇ, ಇತ್ತೀಚೆಗೆ ಆನ್ಲೈನ್ನಲ್ಲಿ ಬಹಳಷ್ಟು ವೆರೈಟಿ ಫೋನ್ಗಳು ಸಿಗುತ್ತಿದೆ. ಆದರೆ ಇವುಗಳನ್ನು ಹಾಸಿಗೆ ಪಕ್ಕವೇ ಇಟ್ಟುಕೊಂಡು ಚಾರ್ಜ್ ಮಾಡಬಾರದು. ಇಲ್ಲದಿದ್ದರೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಹೆಚ್ಚು
ಹಾಗಾಗಿ ದೊಡ್ಡ, ದೊಡ್ಡ ಕಂಪನಿ ಮೊಬೈಲ್ಗಳನ್ನು ಗಾಳಿ ಆಡುವ ವಾತಾವರಣದಲ್ಲಿ ವಾತಾವರಣದಲ್ಲಿ ಟೇಬಲ್ನಂತಹ ಸಮತಟ್ಟಾದ ಮೇಲ್ಮೈಯಲ್ಲಿ ಇಟ್ಟುಕೊಂಡು ಚಾರ್ಜ್ ಮಾಡಬೇಕು. ಆದರೆ ಹೊದಿಕೆಗಳು, ದಿಂಬುಗಳು ಅಥವಾ ನಿಮ್ಮ ದೇಹದ ಮೇಲೆ ಇಟ್ಟುಕೊಂಡು ಎಂದಿಗೂ ಚಾರ್ಜ್ ಮಾಡಬಾರದು