ಕೋಲಾರದಲ್ಲಿ ಚಿಕ್ಕ ತಿರುಪತಿ ದೇವರ ದರ್ಶನ ಪಡೆಯಲು ಭಕ್ತರು ಕಿಕ್ಕಿರಿದು ಸೇರಿದ್ದಾರೆ.

100 ರೂಪಾಯಿ ವಿಶೇಷ ದರ್ಶನ ಪಡೆಯುವ ವ್ಯವಸ್ಥೆ ಮಾಡಿದ್ದಾರೆ.

ಬೆಳಗ್ಗೆ 4 ಗಂಟೆಯಿಂದ ದೇವರ ದರ್ಶನಕ್ಕೆ ಭಕ್ತರು ಆಗಮಿಸುತ್ತಿದ್ದಾರೆ.

ಚಿಕ್ಕತಿರುಪತಿಯ ಪ್ರಸನ್ನ ವೆಂಕಟೇಶ್ವರ ಸ್ವಾಮಿ ಬೇಡಿದ ವರವನ್ನು ಕರುಣಿಸುವ ದೇವರೆಂದು ಭಕ್ತರಿಗೆ ಅಚ್ಚುಮೆಚ್ಚು.

ದೇಗುಲದ ಹೊರಗೆ ಮತ್ತು ಒಳಗೆ ದೇವರ ದರ್ಶನಕ್ಕೆ 30 ಸಾವಿರಕ್ಕೂ ಅಧಿಕ ಭಕ್ತರು ಕಾದು ನಿಂತಿದ್ದಾರೆ.

ಭಕ್ತರು ಹೆಚ್ಚಿರುವ ಕಾರಣ ತಿಮ್ಮಪ್ಪನ ವಿಶೇಷ ದರ್ಶನಕ್ಕೆ 100 ರೂಪಾಯಿ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ.

ಧರ್ಮ ದರ್ಶನದ ಕ್ಯೂನಲ್ಲಿ ದೇವರ ದರ್ಶನಕ್ಕೆ 25 ಸಾವಿರಕ್ಕೂ ಅಧಿಕ ಭಕ್ತರು ಕಾದು ನಿಂತಿದ್ದಾರೆ.

ಕೋಲಾರ, ಬೆಂಗಳೂರು, ಆಂದ್ರ, ತಮಿಳುನಾಡಿನಿಂದ ಭಕ್ತರು ಆಗಮಿಸಿದ್ದಾರೆ.

ಭಕ್ತರು ಹೆಚ್ಚು ಇರುವ ಕಾರಣ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿದ್ದಾರೆ.

ತಿಮ್ಮಪ್ಪನ ದರ್ಶನ ಪಡೆಯಲು ಭಕ್ತರ ದಂಡೇ ಹರಿದು ಬರ್ತಾ ಇದೆ.