ಈ ತಿರುಪತಿ ವೆಂಕಟೇಶ್ವರನ ಸನ್ನಿಧಿಯಲ್ಲಿ ವರ್ಷಕ್ಕೊಮ್ಮೆ ಮಾತ್ರ ದರ್ಶನ!

ಈ ಸನ್ನಿಧಿಯಲ್ಲಿ ಜಾತಿ, ಬಡವ, ಬಲ್ಲಿದ, ಶ್ರೀಮಂತ ಎಂಬ ಬೇಧಬಾವವಿಲ್ಲ.

ಮಹಿಳೆಯರು ಮನೆಯಲ್ಲಿ ತಯಾರಿಸಿದ ನೈವೇದ್ಯವನ್ನ ದೇವರಿಗೆ ಅರ್ಪಿಸಿ ಎಲ್ಲರೂ ಸೇರಿ ಸೇವಿಸುವ ಪದ್ಧತಿ ಬಂದಿದೆ.

ಇದು ವಿಜಯಪುರ ಜಿಲ್ಲೆಯ ನಿಡಗುಂದಿ ಸಮೀಪದ ಅಡಕಲ್ ಗುಂಡಪ್ಪನ ಸನ್ನಿಧಿ.

ಈ ಹಿಂದೆ ಗ್ರಾಮದ ಎಲ್ಲ ಭಕ್ತರು ಪ್ರತಿ ವರ್ಷ ಪಲ್ಲಕ್ಕಿಯನ್ನ ಹೊತ್ತುಕೊಂಡು ತಿರುಪತಿಗೆ ಪಾದಯಾತ್ರೆ ತೆರಳುತ್ತಿದ್ದರಂತೆ.

ಈ ಬೆಟ್ಟದಲ್ಲಿ ಕಾಣುವ ಏಕಶಿಲೆಯಲ್ಲಿ ವೆಂಕಟರಮನ ಮತ್ತು ಲಕ್ಷ್ಮೀ ಮೂರ್ತಿಯನ್ನ ನೂರಾರು ವರ್ಷಗಳ ಹಿಂದೆ ಪ್ರತಿಷ್ಟಾಪಿಸಲಾಗಿದೆ.

ಪ್ರತಿ ವರ್ಷ ಶ್ರಾವಣಮಾಸದ ಮೂರನೇ ಸೋಮವಾರ ಮಾತ್ರ ಒಂದು ದಿನದ ಮಟ್ಟಿಗೆ ಸನ್ನಿಧಿಯ ಬಾಗಿಲು ತೆರೆಯುತ್ತದೆ.

ಈ ವೇಳೆ ಅಸಂಖ್ಯಾತ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ.

ಭಕ್ತರ ಕಷ್ಟವನ್ನ ಮನಗಂಡ ತಿರುಪತಿ ತಿಮ್ಮಪ್ಪ ಸ್ವತಃ ಇನ್ನುಮುಂದೆ ನೀವು ಈ ತಿರುಪತಿ ಕ್ಷೇತ್ರಕ್ಕೆ ಬರೋದು ಬೇಡ.

ಈ ಅರಣ್ಯ ಪ್ರದೇಶದಲ್ಲಿ ಬಂದು ಕೆಲ ಕಾಲ ಸುತ್ತಾಡಿ ನಿಸರ್ಗದ ನಡುವೆ ಊಟ ಮಾಡಿ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ.