ಗಂಡನಿಂದ ಹೆಂಡ್ತಿ ಮುಚ್ಚಿಡುವ ವಿಷಯಗಳು ಇಲ್ಲಿವೆ ನೋಡಿ!

ಆರ್ಥಿಕ ಪಂಡಿತರಾದ ಆಚಾರ್ಯ ಚಾಣಕ್ಯರು ಜೀವನದಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ಹೇಳಿದ್ದಾರೆ. ಗಂಡ-ಹೆಂಡತಿ ನಡುವಿನ ಸಂಬಂಧ ಹೇಗಿರಬೇಕು ಎಂಬುದರ ಬಗ್ಗೆ ಹೇಳಲಾಗಿದೆ

ಆಚಾರ್ಯ ಚಾಣಕ್ಯರು ಸಂಸಾರದಲ್ಲಿ ಅನ್ಯೋನ್ಯತೆ ಹೇಗಿರಬೇಕು? ಒಬ್ಬರೊಬ್ಬರ ಸಂತೋಷಕ್ಕೆ ಮತ್ತೊಬ್ಬರು ಹೇಗೆ ನಡೆದುಕೊಳ್ಳಬೇಕು ಎಂದು ಹೇಳಲಾಗಿದೆ

ಚಾಣಕ್ಯ ನೀತಿ ಪ್ರಕಾರ, ಪತ್ನಿ ತನ್ನ ಜೀವನದಲ್ಲಿ ಕೆಲವು ವಿಷಯಗಳನ್ನು ಪತಿಯೊಂದಿಗೆ ಹಂಚಿಕೊಳ್ಳಲ್ಲವಂತೆ. ಆ ರಹಸ್ಯಗಳು ಏನು ಎಂಬುದನ್ನು ನೋಡೋಣ ಬನ್ನಿ

ವಿವಾಹಿತ ಮಹಿಳೆಯರು ತಮ್ಮದೇ ಆದ ಕಲ್ಪನಾ ಲೋಕ ಹೊಂದಿರುತ್ತಾರೆ. ಮದುವೆ ಮುಂಚೆ ಮತ್ತು ನಂತರ ಹೇಗಿರಬೇಕು ಎಂದು ಕನಸು ಕಂಡಿರುತ್ತಾರೆ. ಆದ್ರೆ ಮದುವೆ ಬಳಿಕ ಈ ಕನಸನ್ನು ಬಹುತೇಕ ಮಹಿಳೆಯರು ಪತಿ ಜೊತೆ ಶೇರ್ ಮಾಡಿಕೊಳ್ಳಲ್ಲ ಎಂದು ಚಾಣಕ್ಯ ನೀತಿ ಹೇಳುತ್ತದೆ

ಕೆಲವೊಮ್ಮೆ ಪತಿ ತೆಗೆದುಕೊಳ್ಳುವ ನಿರ್ಧಾರಗಳು ಇಷ್ಟವಾಗದಿದ್ರೂ ಮಹಿಳೆ ಅದನ್ನು ಒಪ್ಪಿಕೊಳ್ಳುತ್ತಾಳೆ. ಬಹುತೇಕ ಮಹಿಳೆಯರು ತಮ್ಮ ನಿರ್ಧಾರಗಳೇ ಜಾರಿಗೆ ಬರಬೇಕೆಂದು ಹೇಳಲ್ಲ

ಮಹಿಳೆಯರು ಮನೆಯ ಖರ್ಚು ವೆಚ್ಚಗಳಲ್ಲಿ ಹಣ ಉಳಿಸುವ ಗುಣ ಹೊಂದಿರುತ್ತಾರೆ. ಆದ್ರೆ ತಾನು ಉಳಿಸಿದ ಹಣ ಎಷ್ಟು ಎಂಬುದನ್ನು ಮಹಿಳೆ ಎಂದಿಗೂ ಗಂಡನ ಮುಂದೆ ಹೇಳಲ್ಲ. ತುರ್ತು ಸಂದರ್ಭಗಳಲ್ಲಿ ಈ ಹಣ ಬಳಸಲು ಆದ್ಯತೆ ನೀಡುತ್ತಾರೆ

ಮಹಿಳೆಯರು ಪದೇ ಪದೇ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ತನ್ನ ಅನಾರೋಗ್ಯದ ವಿಷಯವನ್ನು ಮಹಿಳೆಯರು ಪತಿಯಿಂದ ಮುಚ್ಚಿಡುತ್ತಾರೆ

ಕುಟುಂಬದ ಸಮಸ್ಯೆಗಳ ಬಗ್ಗೆ ಮಹಿಳೆಯರು ತಮ್ಮ ಆತ್ಯಾಪ್ತ ಅಥವಾ ತವರಿನ ಜೊತೆ ಹಂಚಿಕೊಳ್ಳುವುದುಂಟು

ಆದ್ರೆ ಈ ಬಗ್ಗೆ ಗಂಡ ಕೇಳಿದ್ರೆ ನಾನು ಯಾರಿಗೂ ಈ ವಿಷಯ ಹೇಳಿಲ್ಲ ಎಂದು ಹೇಳುತ್ತಾರಂತೆ