ವಾಹನ ಕಳೆದು ಹೋದ್ರೆ ಠಾಣೆಗೆ ಹೋಗಬೇಕಿಲ್ಲ ಈ ರೀತಿ ಮಾಡಿದ್ರೆ ಸಾಕು!

ನಿಮ್ಮ ನೆಚ್ಚಿನ ವಾಹನ ಕಳೆದು ಹೋದ್ರೆ, ಮೊದಲೆಲ್ಲಾ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬೇಕಿತ್ತು.

ಇಂದು ಪೊಲೀಸ್ ಪ್ರಧಾನ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಭೆ ನಡೆದಿದೆ.

E FIR ಅಂದ್ರೆ, ವಾಹನ ಕಳುವು ಆದ್ರೆ ಅದಕ್ಕೆ ಸಂಬಂಧಿಸಿ ಇ ಎಫ್‍ಆರ್ ದಾಖಲಿಸಬಹುದು.

https://ksp.Karnataka.gov.in ವೆಬ್ ಸೈಟ್ ಮೂಲಕ ದೂರು ದಾಖಲಸಬಹುದು.

ಆನ್‍ಲೈನ್‍ನಲ್ಲಿ ದೂರು ದಾಖಲಿಸಿದ್ರೂ ಎಫ್‍ಐಆರ್ ದಾಖಲಾಗುತ್ತೆ.

ಜೊತೆಗೆ ಆನ್ ಲೈನ್ ವರದಿಯಿಂದ ತನಿಖೆ ಕೂಡ ಬೇಗ ನಡೆಯುತ್ತೆ.

ಆನ್‍ಲೈನ್‍ನಲ್ಲಿ ದೂರು ನೀಡಿದ್ರೆ ನಮ್ಮ ಮಾಹಿತಿ ಸೋರಿಕೆ ಆಗುತ್ತೆ ಎಂಬ ಭಯ ಬೇಡ.

ಈ ವೈಬ್ ಸೈಟ್ ನಲ್ಲಿ ದೂರುದಾರರ ವೈಯಕ್ತಿಕ ಮಾಹಿತಿ ರಕ್ಷಿಸಲು ಭದ್ರತಾ ಕ್ರಮ ಕೈಗೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಟೋ,   ದಾಖಲೆಗಳನ್ನ ಡಿಜಿಟಲ್ ರೂಪದಲ್ಲಿ ಲಗತ್ತಿಸಬಹುದು.