Telugu ಚಿತ್ರಕ್ಕಾಗಿ ಅತ್ಯುತ್ತಮ ನಟಿ ಅವಾರ್ಡ್ ಪಡೆದ ಕನ್ನಡತಿ!

SIIMA 2023 ಪ್ರಶಸ್ತಿ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಚೆಲುವೆ ಶ್ರೀಲೀಲಾ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ

ರವಿತೇಜ ಅಭಿನಯದ ಧಮಾಕಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಕ್ಕಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ

ಈ ಪ್ರಶಸ್ತಿಗಳ ಮುಖ್ಯ ಕಾರ್ಯಕ್ರಮ ದುಬೈನಲ್ಲಿ ನಡೆಯಿತು

ನಟ ಸುಶಾಂತ್ ಮತ್ತು ನಿರ್ದೇಶಕ ಚಂದೂ ಮೊಂಡೇಟಿ ಅವರ ಕೈಯಿಂದ ಶ್ರೀಲೀಲಾ ಪ್ರಶಸ್ತಿಯನ್ನು ಸ್ವೀಕರಿಸಿದರು

ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ

ಶ್ರೀಲೀಲಾ ತೆಲುಗಿನಲ್ಲಿ ಮೋಸ್ಟ್ ವಾಂಟೆಡ್ ಹೀರೋಯಿನ್ ಎನಿಸಿಕೊಂಡಿದ್ದಾರೆ

ಆಕರ್ಷಕ ಸೌಂದರ್ಯ ಮತ್ತು ನಟನೆಯಿಂದ ಎಲ್ಲರನ್ನೂ ರಂಜಿಸುತ್ತಿರುವ ಶ್ರೀಲೀಲಾ ಕೈಯಲ್ಲಿ ಸುಮಾರು ಹತ್ತು ಸಿನಿಮಾಗಳಿವೆ

ಇನ್ನು ಐದು ತಿಂಗಳಲ್ಲಿ ಶ್ರೀಲೀಲಾ ನಟಿಸಿದ ಚಿತ್ರ ಪ್ರತಿ ತಿಂಗಳು ಬಿಡುಗಡೆಯಾಗಲಿದೆ

 ಶ್ರೀಲೀಲಾ ತೆಲುಗು ಚಿತ್ರಕ್ಕಾಗಿ ಅತ್ಯುತ್ತಮ ನಟಿ ಅವಾರ್ಡ್ ಪಡೆದ ಕನ್ನಡತಿಯಾಗಿದ್ದಾರೆ