22 ಸಿಸಿಟಿವಿ, ಗನ್ ಮ್ಯಾನ್, ಸೆಕ್ಯುರಿಟಿ, ಟ್ರಸ್ಟ್ ಸದಸ್ಯರ ನಿರಂತರ ಪರಿಶೀಲನೆಯ ಮೂಲಕ ವಿಶೇಷ ಅಲಂಕಾರಕ್ಕೆ ಬಿಗಿ ಬಂದೋಬಸ್ತ್ ನೀಡಲಾಗಿದೆ

ಒಂದಲ್ಲ ಎರಡಲ್ಲ, ಬರೋಬ್ಬರಿ ಎರಡು ಕೋಟಿಗೂ ಹೆಚ್ಚು ನೋಟು ಹಾಗೂ 50 ಲಕ್ಷ ಮೌಲ್ಯದ ನಾಣ್ಯದಗಳ ಸಿಂಗಾರದಲ್ಲಿ ಗಜಮುಖ ಮಿಂಚುತ್ತಿದ್ದನೆ. ಅಬ್ಬಾ! ಇದೆಲ್ಲಿ ಅಂದ್ಕೊಂಡ್ರಾ? ಇಲ್ಲಿದೆ ನೋಡಿ ವಿವರ

ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ಸತ್ಯಸಾಯಿ ಗಣಪತಿ ದೇಗುಲದಲ್ಲಿ ನೋಟಿನ ಮೂಲಕ ಗಣಪನ ಶೃಂಗಾರ ಮಾಡಲಾಗಿದೆ

ಜೆ.ಪಿ. ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ ವೈಭವದ ಗಣೇಶೋತ್ಸವ ಆಚರಿಸಲಾಗುತ್ತಿದೆ

ಇಡೀ ದೇಗುಲದ ಆವರಣದಲ್ಲಿ ನೋಟು, ನಾಣ್ಯದ ಅಲಂಕಾರ ಮಾಡಲಾಗಿದೆ. ಈ ವೈಭವದ ಅಲಂಕಾರ ಭಕ್ತರಲ್ಲಿ ಹಬ್ಬದ ಸಂತಸವನ್ನು ಇಮ್ಮಡಿಗೊಳಿಸಿದೆ

58 ಲಕ್ಷ ಮೌಲ್ಯದ 5, 10, 20 ನಾಣ್ಯಗಳಿಂದ ಅಲಂಕಾರ ಮಾಡಲಾಗಿದ್ದು, 10, 20, 50, 100, 200, 500, 2000 ನೋಟುಗಳಿಂದ ಹೂವಿನ ಸರಮಾಲೆಯನ್ನೇ ರಚನೆ ಮಾಡಲಾಗಿದೆ

ಸತ್ಯ ಸಾಯಿ ಗಣಪತಿ ದೇವಾಲಯದಲ್ಲಿ ವಿಶೇಷ ರೀತಿಯ ಅಲಂಕಾರ ನೋಡಲು ಬರುವ ಭಕ್ತರ ಮೇಲೆ ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆ

ಬ್ಯಾರಿಕೇಡ್ ಹಾಕಿ ಅಲಂಕಾರ ಮಾಡಿದ ನೋಟು ಭಕ್ತರು ಮುಟ್ಟದಂತೆ ವ್ಯವಸ್ಥೆ ಮಾಡಲಾಗಿದೆ

22 ಸಿಸಿಟಿವಿ ಗನ್ ಮ್ಯಾನ್, ಸೆಕ್ಯುರಿಟಿ, ಟ್ರಸ್ಟ್ ಸದಸ್ಯರ ನಿರಂತರ ಪರಿಶೀಲನೆಯ ಮೂಲಕ ವಿಶೇಷ ಅಲಂಕಾರಕ್ಕೆ ಬಿಗಿ ಬಂದೋಬಸ್ತ್ ನೀಡಲಾಗಿದೆ

150ಕ್ಕೂ ಜನರ ತಂಡ ಹಬ್ಬಕ್ಕೂ ಮೊದಲು ಹದಿನೈದು ದಿನಗಳಿಂದ ನಿರಂತರ ಪರಿಶ್ರಮ ವಹಿಸಿ ಈ ವಿಶೆ ಅಲಂಕಾರ ಮಾಡಿದೆ