ಕಿಚ್ಚ ಸುದೀಪ್ ಸದ್ಯ ತಮ್ಮ ಹೊಸ ಸಿನಿಮಾದ ಕೆಲಸದಲ್ಲಿ ಬ್ಯುಸಿಯಿದ್ದಾರೆ

8 ವರ್ಷಗಳ ನಂತರ  ಸುದೀಪ್‌ಗಾಗಿ ತಮಿಳು ನಟಿ ವರಲಕ್ಷ್ಮಿ ಶರತ್‌ಕುಮಾರ್ ಸಾಥ್ ನೀಡಿದ್ದಾರೆ

ಮಾಣಿಕ್ಯನಿಗೆ ನಟಿ ಮ್ಯಾಕ್ಸ್ ಸಿನಿಮಾದಲ್ಲಿ ಜೊತೆಯಾಗಿದ್ದಾರೆ

ವಿಜಯ್ ಕಾರ್ತಿಕೇಯನ್  ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮ್ಯಾಕ್ಸ್ ಸಿನಿಮಾ ಶೂಟಿಂಗ್ ವೇಗವಾದಿ ಸಾಗುತ್ತಿದೆ

ಸುದೀಪ್ ರವರ ಮಾಣಿಕ್ಯ ಸಿನಿಮಾದಲ್ಲಿ ಕಿಚ್ಚನಿಗೆ ನಾಯಕಿಯಾಗಿ ಜತೆಯಾಗಿದ್ದ ಚೆಲುವೆ ವರಲಕ್ಷ್ಮಿ ಶರತ್‌ಕುಮಾರ್ ಈಗ ‘ಮ್ಯಾಕ್ಸ್’ ಸಿನಿಮಾದಲ್ಲೂ ನಟಿಸಿದ್ದಾರೆ ಎನ್ನಲಾಗುತ್ತಿದೆ

ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ

ಅಲ್ಲದೇ, ವರಲಕ್ಷ್ಮಿ ಸೇರ್ಪಡೆ ಬಗ್ಗೆಯೂ ಅಧಿಕೃತ ಘೋಷಣೆಯಾಗಿಲ್ಲ

ಕೆಲ ಮೂಲಗಳ ಪ್ರಕಾರ, ವರಲಕ್ಷ್ಮಿ ಶರತ್‌ಕುಮಾರ್ ಅವರಿಗೆ ಈ ಸಿನಿಮಾದಲ್ಲಿ ಪ್ರಧಾನ ಪಾತ್ರವಿದ್ದು, ಈಗಾಗಲೇ ಅವರು ಮಹತ್ವದ ದೃಶ್ಯಗಳ ಚಿತ್ರೀಕರಣವನ್ನೂ ಕೂಡ ಮುಗಿಸಲಾಗಿದೆಯಂತೆ

 ಇನ್ನು, ಈ ಸಿನಿಮಾದಲ್ಲಿ ಸುದೀಪ್ ಜೊತೆಗೆ ಸಂಯುಕ್ತಾ ಹೊರನಾಡು, ಅನಿರುದ್ಧ್ ಭಟ್, ಸುಕೃತಾ ವಾಘ್ಳೆ ಮುಂತಾದವರು ನಟಿಸುತ್ತಿದ್ದಾರೆ ಎಂಬುವುದು ತಿಳಿದು ಬಂದಿದೆ

ಇತ್ತೀಚಿಗೆ ರಿಲೀಸ್ ಆದ ಮ್ಯಾಕ್ಸ್ ಸಿನಿಮಾದ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ