ಪ್ರಥಮ ಪೂಜಿತ ಎಂದೇ ಕರೆಯಲ್ಪಡುವ ಗಣೇಶನ ಹಬ್ಬ ಹತ್ತಿರ ಬಂದೆ ಬಿಟ್ಟಿತು. ಗಣೇಶನು ಬೇಡಿದ ವರಗಳ ಕರುಣಿಸುವಾತ, ವಿಘ್ನ ತೊಡೆದು ಹಾಕುವವ

ಭಕ್ತರ ಮನೋಭಿಲಾಷೆ ಈಡೇರಿಸುವವ. ಜೀವನದ ಸಮಸ್ಯೆ ಕಳೆಯಲು ಗರಿಕೆ ಅರ್ಪಿಸಬೇಕು! ಇದರ ಹಿಂದಿದೆ ಮಹತ್ವದ ಕಾರಣ

ಭಕ್ತರ ಮನೋಭಿಲಾಷೆ ಈಡೇರಿಸುವವ. ಜೀವನದ ಸಮಸ್ಯೆ ತೊಡೆದು ಹಾಕಲು ಗರಿಕೆ ಇಟ್ಟು ಗಣೇಶನನ್ನು ಭಕ್ತಿಯಿಂದ ಪೂಜಿಸಿದರೆ ಉತ್ತಮ ಫಲ ದೊರೆಯುತ್ತದೆ

ಬುಧವಾರ ಮತ್ತು ಸಂಕಷ್ಟಿಯ ದಿನ ಗರಿಕೆ ಇಟ್ಟು ಗಣೇಶನನ್ನು ಪೂಜಿಸಿದರೆ ಬೇಡಿದ ವರ ಹಾಗೂ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಗರಿಕೆಯನ್ನು ಗಣೇಶನಿಗೆ ಅರ್ಪಿಸಿ ಗಣೇಶನನ್ನು ಮೆಚ್ಚಿಸಬಹುದು ಎಂಬ ನಂಬಿಕೆಯಿದೆ

ಗಣೇಶನು ಬೇಗನೆ ಬೇಡಿದ ಬೇಡಿಕೆ ಈಡೇರಿಸುತ್ತಾನೆ ಎಂದು ಹೇಳಲಾಗುತ್ತೆ. ಹಾಗಾಗಿ ಗಣೇಶನ ದೇವಸ್ಥಾನಕ್ಕೆ ಹೋಗಿ ಪೂಜಿಸಿದರೆ ಜೀವನದಲ್ಲಿ ಸಮೃದ್ಧಿ ಸಾಧಿಸಬಹುದು

 ಹಾಗಾಗಿ ಬುಧವಾರ ತಪ್ಪದೇ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯಿರಿ. ಹುಲ್ಲು ಗರಿಕೆ ಗಣೇಶನಿಗೆ ಅತ್ಯಂತ ಪ್ರಿಯವಾದ ವಸ್ತು. ಗಣೇಶನಿಗೆ ಗರಿಕೆ ಹುಲ್ಲು ಅರ್ಪಿಸೋದು ಒಳ್ಳೆಯ ಫಲ ನೀಡುತ್ತದೆ

ಒಂದು ಕಾಲದಲ್ಲಿ ಅನಲಾಸುರ ರಾಕ್ಷಸನು ಸ್ವರ್ಗದಲ್ಲಿ ಆತಂಕ ಉಂಟು ಮಾಡಿದ್ದ. ಅವನ ಕಣ್ಣಿನಿಂದ ಬರುವ ಬೆಂಕಿಯು ಎಲ್ಲವನ್ನು ಸುಟ್ಟು ಹಾಕುತ್ತಿತ್ತು. ದೇವನಾದ ಗಣೇಶನ ಬಳಿ ದೇವತೆಗಳು ಸಹಾಯಕ್ಕೆ ಬಂದರು. ಆಗ ಗಣೇಶ ಮತ್ತು ರಾಕ್ಷಸ ಅನಲಾಸುರ ಇಬ್ಬರು ಯುದ್ಧ ಮಾಡುತ್ತಾರೆ

ಆಗ ಅನಲಾಸುರನು ಬೆಂಕಿಯ ಉಂಡೆಗಳನ್ನು ಗಣೇಶನ ಮೇಲೆ ಎಸೆದಾಗ ಗಣೇಶನು ಇವನನ್ನು ಸಂಹಾರ ಮಾಡಲು ವಿರಾಟ ರೂಪ ಪಡೆದು ಸಂಪೂರ್ಣವಾಗಿ ಅನಲಾಸುರನನ್ನು ನುಂಗಿ ಬಿಡುತ್ತಾನೆ

ಗರಿಕೆಯನ್ನು ಗಣೇಶ ದೇವರಿಗೆ ಅರ್ಪಿಸಿದರೆ ಸಂತುಷ್ಟನಾಗಿ ವಿಘ್ನ ನಿವಾರಕನು ಜೀವನದ ಸುಖ ಸಂತೋಷ ಕಾಪಾಡುತ್ತಾನೆ. ಜೀವನದ ಎಲ್ಲಾ ದುಃಖಗಳನ್ನು ತೊಡೆದು ಹಾಕುತ್ತಾನೆ

ಬುಧ ದೋಷ ಪರಿಹಾರಕ್ಕೂ, ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತೆ. ಗರಿಕೆ ದೇವ ತತ್ವಗಳಾದ ಶಿವ, ಶಕ್ತಿ ಮತ್ತು ಗಣೇಶನನ್ನು ಪ್ರತಿಬಿಂಬಿಸುತ್ತವೆ ಮತ್ತು ಗರಿಕೆಯ ಹುಲ್ಲಿಗೆ ಗಣೇಶ ದೇವರ ಆತ್ಮವನ್ನು ಆಕರ್ಷಿಸುವ ಶಕ್ತಿಯಿದೆ