ಕಾಂತಾರ ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ!

ಕಾಂತಾರ ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ!

ಕಳೆದ ವರ್ಷ ಬಿಡುಗಡೆಯಾದ ಕಾಂತಾರ ಸಿನಿಮಾದ ಅಲೆ ಇನ್ನೂ ಕಡಿಮೆಯಾಗಿಲ್ಲ

ಬಿಡುಗಡೆಯಾದಾಗಿನಿಂದ ಕಾಂತಾರ ಸಿನಿಮಾಗೆ ಸಾಲುಸಾಲು ಪ್ರಶಸ್ತಿಗಳು ಬರುತ್ತಿವೆ 

ಇದೀಗ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕಾಂತಾರ ಸಿನಿಮಾ 10 ಅವಾರ್ಡ್‌ಗಳನ್ನು ಬಾಚಿಕೊಂಡಿದೆ

ಅತ್ಯುತ್ತಮ ನಟನೆ, ನಿರ್ದೇಶನ ಹಾಗು ಪಾಥ್ ಬ್ರೇಕಿಂಗ್ ಸ್ಟೋರಿ ಸೇರಿ ಒಟ್ಟು 3 ಪ್ರಶಸ್ತಿಗಳು ರಿಷಬ್ ಶೆಟ್ಟಿಯವರಿಗೆ ಲಭಿಸಿದೆ 

ಅತ್ಯುತ್ತಮ ನಟಿ, ಖಳನಟ, ಹಾಸ್ಯನಟ, ಸಂಗೀತ ನಿರ್ದೇಶಕ, ಗಾಯಕ, ಸಾಹಿತಿ ಸೇರಿ ಒಟ್ಟು 10 ಅವಾರ್ಡ್ಸ್ ಕಾಂತಾರ ಸಿನಿಮಾಗೆ ಸಿಕ್ಕಿದೆ 

ಈ ಮೂಲಕ ಸೈಮಾ ಅವಾರ್ಡ್ಸ್‌ನಲ್ಲಿ ಅತೀ ಹೆಚ್ಚು ಅವಾರ್ಡ್ ಪಡೆದ ಚಿತ್ರ ಎಂಬ ಹೆಗ್ಗಳಿಕೆಗೆ ಕಾಂತಾರ ಪಾತ್ರವಾಗಿದೆ

ಸಿನಿಮಾ ಬಿಡುಗಡೆಯಾಗಿ ವರ್ಷವೇ ಆದರೂ ಇನ್ನೂ ಕಾಂತಾರ ಹವಾ ಕಡಿಮೆಯಾಗಿಲ್ಲ 

ಕಳೆದ ವರ್ಷ ಬಿಡುಗಡೆಯಾದ ಈ ಸಿನಿಮಾ ದೇಶದೆಲ್ಲೆಡೆ ಉತ್ತಮ ಪ್ರಶಂಸೆ ಗಳಿಸಿತ್ತು

ಇದೀಗ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ 10 ಅವಾರ್ಡ್‌ ಬಾಚಿಕೊಳ್ಳುವ ಮೂಲಕ ಕಾಂತಾರ ಮತ್ತೊಂದು ಸಾಧನೆ ಮಾಡಿದೆ