ಮಂಡ್ಯ ಸ್ಟೈಲ್​ನಲ್ಲಿ ರಾಗಿ ಮುದ್ದೆ ಮಾಡಿ ತಿನ್ನಿ, ಆಹಾ! ಏನ್ ರುಚಿ ಗುರೂ

ರಾಗಿ ಮುದ್ದೆ ಅಂದ್ರೆ ಏನೋ ಒಂಥರಾ ಎಮೋಷನಲ್​ ಅಟ್ಯಾಚ್ ಮೆಂಟ್​ ಅಲ್ವಾ? ಇದರ ಜೊತೆಗೆ ನೀವು ಪಾಲಕ್​ಸೊಪ್ಪಿನ ಗ್ರೇವಿ ತಿಂದಿದ್ದೀರಾ? ಹಾಗಾದ್ರೆ ಇಲ್ಲಿದೆ ರೆಸಿಪಿ

ರಾಗಿ ಮುದ್ದೆ ಅಂದ್ರೆ ಅದಷ್ಟೋ ಜನರಿಗೆ ಸಖತ್ ಫೇವರೇಟ್ ಆಹಾರವಾಗಿರುತ್ತೆ

ರಾಗಿ ಮುದ್ದೆ ಚಿಕನ್ ಸಾಂಬಾರ್​ ಸೂಪರ್​ ಕಾಂಬಿನೇಷನ್ ಅಂತನೇ ಹೇಳಬಹುದು. ಉಪ್ಸಾರು ಕೂಡ ರಾಗಿ ಮುದ್ದೆಗೆ ಬೆಸ್ಟ್​ ಆಗುತ್ತೆ

ಇಂದು ನಿಮಗೆ ರಾಗಿ ಮುದ್ದೆ  ಹೇಗೆ ಮಾಡೋದು ಅಂತ ಹೇಳ್ತೀವಿ ಕೇಳಿ

ಈ ರೆಸೀಪಿ ಸಖತ್ ಈಸಿ, ಒಂದು ಬಾರಿ ಟ್ರೈ ಮಾಡಿ ನೋಡಿ

ಬೇಕಾಗುವ ಸಾಮಾಗ್ರಿಗಳು: ರಾಗಿ ಹಿಟ್ಟು, ಉಪ್ಪು, ಪಾಲಕ್ ಸೊಪ್ಪು, ಈರುಳ್ಳಿ, ಹಸಿ ಮೆಣಸಿನಕಾಯಿ, ಟೊಮೇಟೊ, ಬೆಳ್ಳುಳ್ಳಿ, ಹುಣಸೆ ಹುಳಿ, ತುಪ್ಪ

ಮಾಡುವ ವಿಧಾನ ತಿಳಿಯಿರಿ: ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ ಚೆನ್ನಾಗಿ ಕುದಿಸಿ. ಇದಕ್ಕೆ ರಾಗಿ ಹಿಟ್ಟನ್ನು ಮಿಶ್ರಣ ಮಾಡಿ. ಹಾಗೆ ಮುಚ್ಚಿಡಿ (1 ನಿಮಿಷ). ನಂತರ ಇದನ್ನು ಸೌಂಟಿನಿಂದ ಉಂಡೆಯಾಗದಂತೆ ರಾಗಿಯನ್ನು ಚೆನ್ನಾಗಿ ಮಿಶ್ರಣ ಮಾಡಿ

ಹೀಗೆ ಹಿಟ್ಟನ್ನು ಚೆನ್ನಾಗಿ ಬೇಯಿಸಿದ ನಂತರ, ಒಂದು ತಟ್ಟೆಗೆ ತುಪ್ಪವನ್ನು ಹಾಕಿ, ಕೈ ಗೆ ತಣ್ಣೀರನ್ನು ಹಾಕಿ, ಮುದ್ದೆ ಕಟ್ಟಿ

ಇದು ದೇಹಕ್ಕೆ ಉತ್ತಮ ಪೌಷ್ಠಿಕಾಂಶತೆಯನ್ನು ಒದಗಿಸುತ್ತದೆ. ಹೃದಯವನ್ನು ಕಾಪಾಡುತ್ತದೆ, ರಕ್ತದಲ್ಲಿ ಹಿಮೋಗ್ಲೋಬಿನ್ ಹೆಚ್ಚಾಗುತ್ತೆ. ಇನ್ಯಾಕೆ ತಡ ಇಂದೇ ಈ ರೆಸಿಪಿಯನ್ನು ಮನೆಯಲ್ಲಿ ಮಾಡಿ