ಪೊರಕೆಯನ್ನ ಲಕ್ಷ್ಮಿ ದೇವಿಯ ಸ್ಥಾನ ಎನ್ನಲಾಗುತ್ತದೆ. ಹಾಗಾಗಿ ಇದರ ಬಗ್ಗೆ ಅನೇಕ ನೀತಿ-ನಿಯಮಗಳಿದೆ. ನಾವು ಅವುಗಳನ್ನ ಅನುಸರಿಸಿದರೆ ಆರ್ಥಿಕವಾಗಿ ಲಾಭವಾಗುತ್ತದೆ

ಹಾಗಾದ್ರೆ ಪೊರಕೆಯ ವಿಚಾರದಲ್ಲಿ ಯಾವ ನಿಯಮಗಳನ್ನ ಅನುಸರಿಸಬೇಕು ಎಂಬುದು ಇಲ್ಲಿದೆ

ವಾಸ್ತು ಪ್ರಕಾರ ನಾವು ಪೊರಕೆಯನ್ನ ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ನಾವು ಪೊರಕೆಯ ವಿಚಾರದಲ್ಲಿ ಮಾಡುವ ತಪ್ಪು ಅನೇಕ ಸಮಸ್ಯೆಗಳನ್ನ ಉಂಟು ಮಾಡುತ್ತದೆ, ಹಾಗಾಗಿ ಸ್ವಲ್ಪ ನಿಯಮಗಳನ್ನ ಅನುಸರಿಸಬೇಕು

ಈ ಪೊರಕೆಯ ಕಾರಣದಿಂದ ನಾವು ವಾಸ್ತು ಸಮಸ್ಯೆಗಳನ್ನ ಅನುಭವಿಸಬೇಕಾಗುತ್ತದೆ. ಮನೆಯಲ್ಲಿನ ನೆಮ್ಮದಿ ಕಳೆದು ಹೋಗುತ್ತದೆ. ಆದ್ದರಿಂದ ನೀವು ಈ ಎಲ್ಲಾ ಸಮಸ್ಯೆಗಳಿಂದ ಪರಿಹಾರ ಪಡೆಯಲು ಕೆಲವೊಂದು ನಿಯಮಗಳನ್ನ ಅನುಸರಿಸಬೇಕು

ಶನಿವಾರದಂದು ಹೊಸ ಪೊರಕೆಯನ್ನ ಯಾವುದೇ ಕಾರಣಕ್ಕೂ ಖರೀದಿ ಮಾಡಬಾರದು. ಇದರಿಂದ ಶನಿಯ ಕೋಪಕ್ಕೆ ಗುರಿಯಾಗುತ್ತೀರಿ

ಪೊರಕೆಗೆ ಬಿಳಿ ದಾರವನ್ನು ಕಟ್ಟಬೇಕು ಎಂದು ಹಿರಿಯರು ಹೇಳಿರುವುದನ್ನ ನೀವು ಕೇಳಿರಬಹುದು. ಇದನ್ನ ಕಟ್ಟುವುದರಿಂದ ಲಕ್ಷ್ಮಿ ದೇವಿಯು ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ

ಇನ್ನು ಮಂಗಳವಾರ ಮತ್ತು ಭಾನುವಾರದಂದು ಪೊರಕೆಯನ್ನು ಖರೀದಿಸುವುದು ಮಂಗಳಕರ ಎನ್ನಲಾಗುತ್ತದೆ

ಪೊರಕೆಯಲ್ಲಿ ಲಕ್ಷ್ಮಿ ವಾಸ ಮಾಡುವುದರಿಂದ ಅದನ್ನ ತುಳಿಯಲು ಹೋಗಬಾರದು. ಅದನ್ನ ನೀವು ಮೆಟ್ಟಿದರೆ ಲಕ್ಷ್ಮಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಅಲ್ಲದೇ, ಇದರಿಂದ ನಿಮಗೆ ಬಡತನ ಸಹ ವಕ್ಕರಿಸುತ್ತದೆ ಎನ್ನುವ ನಂಬಿಕೆ ಇದೆ

ಪೊರಕೆಯನ್ನು ನಾವು ಎಂದಿಗೂ ಎಸೆಯಬಾರದು. ಅದನ್ನ ಮನೆಯ ಒಳಗೆ ಸಹ ನೀಟಾಗಿ ಇಡಬೇಕಾಗುತ್ತದೆ. ಅದರಲ್ಲೂ ಶನಿವಾರದಂದು ಮಾತ್ರ ಪೊರಕೆಯನ್ನು ಮನೆಯಿಂದ ಹೊರಗೆ ಇಡಬೇಕು. ಹೀಗೆ ಮಾಡುವುದರಿಂದ ಬಡತನ ದೂರವಾಗುತ್ತದೆ

ಶುಕ್ರವಾರವನ್ನು ತಾಯಿ ಲಕ್ಷ್ಮಿಯ ದಿನವೆಂದು ಪರಿಗಣಿಸಲಾಗುತ್ತದೆ, ಹಾಗಾಗಿ ಈ ದಿನ ನೀವು ಪೊರಕೆ ಮೆಟ್ಟುವುದು, ಖರೀದಿ ಮಾಡುವುದು ಮಾಡಬಾರದು. ಅದರಲ್ಲೂ ಇದ್ದನ್ನ ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಇಡಬಾರದು

ದುಡ್ಡಿನ ಬಗ್ಗೆ ಹೀಗೆಲ್ಲಾ ಕನಸು ಬಿದ್ರೆ ಫುಲ್ ಲಕ್​ ಅಂತೆ. ಸುದ್ದಿ ಓದಲು ಕೆಳಗಿನ ಲಿಂಕ್​ ಕ್ಲಿಕ್​ ಮಾಡಿ.