ಇನ್ನೇನು ಶ್ರಾವಣ ಮಾಸವೂ ಮುಗಿದಿದ್ದು, ಗಣೇಶ ಚತುರ್ಥಿಯನ್ನು ಜನರು ಸಂಭ್ರಮಿಸಿದ್ರು

ಆದ್ರೆ ಇದುವರೆಗೂ ಒಂದು ತಿಂಗಳ ಕಾಲ ವಿವಿಧ ಪೂಜಾ ಕೈಂಕರ್ಯ ನಿಮಿತ್ತ ಸಸ್ಯಹಾರ ಸೇವಿಸುತ್ತಿದ್ದವರು ಇಂದು ಬಾಡೂಟ ತಯಾರಿಸಿಕೊಂಡು ಖುಷಿಪಟ್ಟರು

ಮಲೆನಾಡಿನ ಬಹುತೇಕ ಮಂದಿ ಗೌರಿ ಗಣೇಶ ಹಬ್ಬವನ್ನ ಒಟ್ಟಿಗೆ ಆಚರಿಸಿದ್ದಾರೆ

ಅಂತಹ ಮನೆಗಳಲ್ಲಿ ಈಗ ಕೋಳಿ ಸಾರು ಘಮಘಮಿಸುತ್ತಿದೆ

ಆದ್ರೆ ಇದುವರೆಗೂ ಒಂದು ತಿಂಗಳ ಕಾಲ ವಿವಿಧ ಪೂಜಾ ಕೈಂಕರ್ಯ ನಿಮಿತ್ತ ಸಸ್ಯಹಾರ ಸೇವಿಸುತ್ತಿದ್ದವರು ಇಂದು ಬಾಡೂಟ ತಯಾರಿಸಿಕೊಂಡು ಖುಷಿಪಟ್ಟರು

ಅದಕ್ಕಾಗಿ ಬೆಳಿಗ್ಗೆಯೇ ಮಾರುಕಟ್ಟೆಗೆ ಬಂದ ಜನರು ಕೋಳಿ ಮಾಂಸಗಳನ್ನು ಖರೀದಿಸಿ ಕೊಂಡೊಯ್ದರು

ಸದ್ಯ ಮಾರುಕಟ್ಟೆಯಲ್ಲಿ ಚಿಕನ್ ರೇಟ್ 200 ರೂಪಾಯಿ ಹಾಗೂ ಮಟನ್ ರೇಟ್ 650 ರಿಂದ 700 ರೂ ಇದ್ರೂ ಜನರು ಅದ್ಯಾವುದನ್ನೂ ಲೆಕ್ಕಿಸದೇ ಹಬ್ಬದ ಮರುದಿನದ ಈ ಸಂಭ್ರಮಕ್ಕೆ ಕೊರತೆಯಾಗದಂತೆ ಮಾಂಸ ಖರೀದಿಸಿ ಕೊಂಡೊಯ್ದರು

ಅಷ್ಟೇ ಅಲ್ಲದೇ ತಮ್ಮ ಕುಟುಂಬಿಕರು, ಆಪ್ತರ ಜೊತೆಗೂಡಿ ಬಾಡೂಟ ಸವಿಯುವ ಮೂಲಕ ಹಬ್ಬ ಮುಗಿದ ಸಂಭ್ರಮವನ್ನ ಆಚರಿಸಿಕೊಂಡರು

ಒಟ್ಟಿನಲ್ಲಿ ಪೂಜಾ ಕೈಂಕರ್ಯ ನಿಮಿತ್ತ ತಿಂಗಳ ಕಾಲ ಸಸ್ಯಾಹಾರಿಗಳಾಗಿದ್ದ ಆಸ್ತಿಕರು ಇಂದಿನಿಂದ ಮತ್ತೆ ಮಾಂಸಹಾರ ಸವಿಯುವ ಮೂಲಕ ಖುಷಿಪಟ್ಟರು

ಚಿನ್ನ, ಬೆಳ್ಳಿ ಬೇಕಿಲ್ಲ ಜೇಡಿಮಣ್ಣಿದ್ರೆ ಸಾಕು; ಡಿಸೈನ್‌ ಡಿಸೈನ್‌ ಆಭರಣ ರೆಡಿ!