ಗಣೇಶನ ಜೊತೆ ಪಂಜುರ್ಲಿ, ಗುಳಿಗ! ಮಾಂಸಾಹಾರ ತ್ಯಜಿಸಿ ಅದ್ಭುತ ಸೆಟ್ ನಿರ್ಮಾಣ

16 ಲಕ್ಷ ವೆಚ್ಚದ ಕಾಂತಾರ ಕಾಡಿನಲ್ಲಿ ಮೂಷಿಕ ವಾಹನ ಗಣೇಶ!

ಗಣೇಶನ ದರ್ಶನಕ್ಕೆ ಬರುವ ಭಕ್ತರಿಗೆ ಸಿಗುತ್ತಿದೆ ಪಂಜುರ್ಲಿ, ವರಾಹರೂಪಿ, ಭೂತಕೋಲ, ಗುಳಿಗ ದೈವ ದರ್ಶನ

2022 ರಲ್ಲಿ ರೀಲಿಸ್ ಆಗಿದ್ದ ಕಾಂತಾರ ಕಲರವ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ

ಹಾಗಾಗಿ ಬೆಂಗಳೂರು ಹೊರವಲಯ ಆನೇಕಲ್ ಸಮೀಪದ ಡೆಂಕಣೆಕೋಟೆ ಪಟ್ಟಣದಲ್ಲಿ ಶ್ರೀ ರಾಜಮಾರ್ತಾಂಡ ಗಣಪತಿ ಭಕ್ತ ಮಂಡಳಿ ಕಾಂತಾರಾ ಚಿತ್ರದಿಂದ ಪ್ರೇರಣೆಗೊಂಡು ಬರೋಬ್ಬರಿ 16 ಲಕ್ಷ ರೂ. ಖರ್ಚಿನಲ್ಲಿ ಆರ್ಟ್ ಡೈರೆಕ್ಟರ್ ಚಿತ್ತಾ ಜಿನೇಂದ್ರ ಕಾಂತಾರ ಸೆಟ್ ನಿರ್ಮಿಸಿ ಅದ್ದೂರಿ ಕಾಂತಾರ ಸೆಟ್‌ನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ

ತುಳುನಾಡಿನ ಆರಾಧ್ಯ ದೈವದ ನಿಜವಾದ ಕಥೆಯಾಗಿರುವುದರಿಂದ ಶ್ರದ್ಧೆ, ಭಕ್ತಿಯಿಂದ ಕಳೆದೊಂದು ತಿಂಗಳಿನಿಂದ ಮಾಂಸಾಹಾರ ತ್ಯಜಿಸಿ ಕಾಂತಾರ ಸೆಟ್ ನಿರ್ಮಾಣ ಮಾಡಲಾಗಿದೆ

ಒಳ ಹೋಗುತ್ತಿದ್ದಂತೆ ಸುತ್ತಲೂ ಫೈರ್ ಫೀಲ್ ಆಗುವಂತೆ ಭೂತಕೋಲ ಸೆಟ್ ಹಾಕಲಾಗಿದೆ

ಭೂತಕೋಲ ಕೈಯಲ್ಲಿ ಪಂಜನ್ನು ಹಿಡಿದು ಆಕ್ಷನ್ ಮಾಡುವ ರೀತಿ ರಿಯಲಿಸ್ಟಿಕ್ ಆಗಿ ನಿರ್ಮಿಸಿದ್ದಾರೆ

 ಒಳಭಾಗದಲ್ಲಿ ಕಾಂತಾರ ಸಿನಿಮಾ ಕಥೆಯ ರಾಜನಂತೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಪಂಜುರ್ಲಿ, ವರಾಹರೂಪಿ, ಭೂತಕೋಲ, ಗುಳಿಗ ದೈವ, ಕಾಡು ಬೆಟ್ಟ ಸೆಟ್‌ನ ಹೈಲೆಟ್ಸ್ ಆಗಿವೆ ಎಂದು ಆಯೋಜಕರಾದ ಬಾಬು ತಿಳಿಸಿದ್ದಾರೆ

ಮಾಸಾಶನದ ಆಸೆಗೆ ವೃದ್ಧಾಪ್ಯ ವೇತನವೂ ಹೋಯ್ತು, ದೈವಾಂಶ ಸಂಭೂತರಿಗೆ ದೇವರೇ ದಿಕ್ಕು!