ಶುಭಮನ್ ಗಿಲ್‌ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಕ್ರಿಕೆಟ್ ಕ್ಷೇತ್ರದಲ್ಲಿ ದಾಖಲೆಗಳನ್ನ ಮಾಡುತ್ತಿದ್ದು

ಪ್ರತಿ ಪಂದ್ಯದಲ್ಲೂ ಅವರ ಮೇಲಿನ ನಿರೀಕ್ಷೆ ಹೆಚ್ಚುತ್ತಲೇ ಹೋಗುತ್ತಿದೆ. ಜ್ಯೋತಿಷ್ಯದ ಪ್ರಕಾರ ಮುಂದಿನ ಪಂದ್ಯಗಳಲ್ಲಿ ಅವರ ಪ್ರದರ್ಶನ ಹೇಗಿರಲಿದೆ ಎಂಬುದು ಇಲ್ಲಿದೆ

ಸದ್ಯ ಭಾರತದ ಕ್ರಿಕೆಟ್​ ತಂಡದಲ್ಲಿ ಶುಭಮನ್ ಗಿಲ್ ಆರ್ಭಟ ಹೆಚ್ಚಾಗಿದೆ ಎನ್ನಬಹುದು

ನಾವು ಜ್ಯೋತಿಷ್ಯದ ಪ್ರಕಾರ ಅವರ ಭವಿಷ್ಯವನ್ನ ನೋಡುವುದಾದರೆ ಈ ವರ್ಷ ನಿಜಕ್ಕೂ ಅವರಿಗೆ ಬಹಳ ಅದ್ಭುತವಾಗಿತ್ತು

ಈ ಸಲ ಬಿಗ್​ಬಾಸ್​ ಮನೆಗೆ ಬರ್ತಾರಾ ನಿವೇದಿತಾ ಗೌಡ?

ಅದರಲ್ಲೂ ಮುಂದಿನ ದಿನಗಳು ಸಹ ಚೆನ್ನಾಗಿರಲಿದ್ದು, ಭಾರತದ ಗೆಲುವಿನಲ್ಲಿ ಪ್ರಮುಖವಾದ ಪಾತ್ರವನ್ನ ವಹಿಸಲಿದ್ದಾರೆ

ಈ ವರ್ಷವು ಶುಭಮನ್ ಗಿಲ್‌ಗೆ ಅದ್ಭುತವಾಗಿದೆ ಎನ್ನುವುದಕ್ಕೆ ಅನೇಕ ಉದಾಹರಣೆಗಳಿದ್ದು

ಮುಖ್ಯವಾಗಿ ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕವನ್ನೂ ಗಳಿಸಿದ್ದಾರೆ. ಭಾನುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಗಿಲ್ ಆಸ್ಟ್ರೇಲಿಯಾ ವಿರುದ್ಧ 97 ಎಸೆತಗಳಲ್ಲಿ 104 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ

ಶುಭಮನ್ ಗಿಲ್ 8 ಸೆಪ್ಟೆಂಬರ್ 1999ರಂದು ಜನಿಸಿದ್ದು, ಜನ್ಮ ದಿನಾಂಖದ ಪ್ರಕಾರ ಅವರ ರಾಶಿ ಕನ್ಯಾ ಆಗಿದೆ

30 ವರ್ಷಗಳಿಂದ ಹೈನುಗಾರಿಕೆ ನಂಬಿ ಬದುಕುತ್ತಿದ್ದಾರೆ ಈ ರೈತ!

ಈ ರಾಶಿಯಲ್ಲಿ ಸದ್ಯ ಸೂರ್ಯ ಸಂಚಾರ ಮಾಡುತ್ತಿದ್ದು, ಅಕ್ಟೋಬರ್ 17ರ ವರೆಗೆ ಇವರಿಗೆ ಅದೃಷ್ಟ ಬಹಳ ಚೆನ್ನಾಗಿರಲಿದೆ

ಇನ್ನು ಸೂರ್ಯನ ಪ್ರಭಾವದಿಂದ ಇವರ ಪ್ರಗತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಅಲ್ಲದೇ ಒಂದರ್ಥದಲ್ಲಿ ಇವರ ಹಣೆವರಹವನ್ನ ಸೂರ್ಯನೇ ನಿರ್ಧಾರ ಮಾಡುವವನಾಗಿದ್ದು, ಈ ಬಾರಿ ವಿಶ್ವಕಪ್​ನಲ್ಲಿ ಮಿಂಚಲಿದ್ದಾರೆ ಎನ್ನಬಹುದು

ಇನ್ನು ಇವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ ಕ್ರಿಕೆಟ್​ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಜೊತೆ ಇವರ ಹೆಸರು ತಳುಕು ಹಾಕಿಕೊಂಡಿದ್ದು, ಇಬ್ಬರೂ ಈ ಬಗ್ಗೆ ಮಾತನಾಡಿಲ್ಲ

ಆದರೆ ಅಭಿಮಾನಿಗಳು ಮಾತ್ರ ಈ ಜೋಡಿ ಒಟ್ಟಿಗಿದ್ದರೆ ಸಂತೋಷ ಎನ್ನುತ್ತಿದ್ದಾರೆ

ನಿಮ್ಮ ಲ್ಯಾಪ್​ಟಾಪ್​ ಸ್ಕ್ರೀನ್​ ಫಳ ಫಳ ಅಂತಾ ಹೊಳಿಬೇಕಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ