2022ರಲ್ಲಿ ಐಪಿಎಲ್‌ಗೆ ಪ್ರವೇಶವಾದ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ಮಿಂಚಿರುವ ಹಾರ್ದಿಕ್ ಪಾಂಡ್ಯ ಈ ಬಾರಿ ವಿಶ್ವಕಪ್ ನಲ್ಲಿ ಭಾರತದ ಉಪನಾಯಕನಾಗಿ ಮೋಡಿ ಮಾಡಲಿದ್ದಾರಾ?

ಅವರ ಜಾತಕ ಏನು ಹೇಳುತ್ತದೆ? ಅವರ ಮುಂದಿನ ದಿನಗಳು ಹೇಗಿರಲಿದೆ? ಇಲ್ಲಿದೆ ಮಾಹಿತಿ

ಹಾರ್ದಿಕ್ ಪಾಂಡ್ಯ ಆತ್ಮ ವಿಶ್ವಾಸದ ದೊಡ್ಡ ಮರವಾಗಿದ್ದು, ಅವರ ಜೀವನದ ನಿರ್ದೇಶಕ ಮತ್ತು ನಿರ್ಮಾಪಕ ಅವರೇ ಎನ್ನಬಹುದು

ಅವರು ಅಕ್ಟೋಬರ್ 11, 1993 ರಂದು ಜನಿಸಿದ್ದು. ಇದರ ಅನುಸಾರ ಅವರ ರಾಶಿ ತುಲಾ

 ಕಂಪ್ಯೂಟರ್ ಸೈನ್ಸ್ ಪ್ರೊಫೆಸರ್ ಆಗಿದ್ದ ಮಹಿಳೆ ಇದೀಗ ವಾರ್ಷಿಕ 3 ಕೋಟಿ ಗಳಿಸುತ್ತಿದ್ದಾರೆ! ಇವರ ಸಾಧನೆಯೇ ಅನೇಕರಿಗೆ ಸ್ಪೂರ್ತಿ

ರಾಶಿಯ ಪ್ರಕಾರ ನಾವು ನೋಡುವುದಾದರೆ ಅವರು ಎಲ್ಲವನ್ನೂ ಸಮತೋಲಿತವಾಗಿ ನಡೆಸಿಕೊಂಡು ಹೋಗುತ್ತಾರೆ

ಹಾಗಾಗಿಯೇ ಈ ಸ್ಟಾರ್ ಕ್ರಿಕೆಟಿಗ ತನ್ನ ಜೀವನದಲ್ಲಿ ಅತ್ಯುತ್ತಮ ಮತ್ತು ಕೆಟ್ಟ ಸನ್ನಿವೇಶಗಳನ್ನು ಮತ್ತು ಅನೇಕ ಏರಿಳಿತಗಳನ್ನು ಕಂಡಿದ್ದಾರೆ ಎನ್ನಬಹುದು

ಹಾರ್ದಿಕ್ ಪಾಂಡ್ಯ ಅವರ ಚಾರ್ಟ್ ಪ್ರಕಾರ, ಗುರು ಆತ್ಮಕಾರಕ ಮತ್ತು ಸೂರ್ಯ ಅಮಾತ್ಯಕಾರಕನಾಗಿದ್ದು, ಹಾಗೆಯೇ, ಹಾರ್ದಿಕ್ ಪಾಂಡ್ಯ ಜಾತಕದ ಪ್ರಕಾರ ಏಕಾಂಗಿಯಾಗಿ ಟೀಮ್ ಇಂಡಿಯಾವನ್ನು ಗೆಲುವಿನತ್ತ ಮುನ್ನಡೆಸುವ ಅಥವಾ ಯಶಸ್ಸನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎನ್ನಬಹುದು

ಅವರ ಚಾರ್ಟ್‌ನಲ್ಲಿ, ಶನಿಯು ಹಿಮ್ಮುಖವಾಗಿರುವ ಕಾರಣ ಹಾರ್ದಿಕ್ ಪಾಂಡ್ಯ ತುಂಬಾ ಕಠಿಣ ಪರಿಶ್ರಮಿ ಎಂದು ಅರ್ಥ ಆದರೆ ಜ್ಯೋತಿಷ್ಯದ ಪ್ರಕಾರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಾಗ ತಾಳ್ಮೆಯಿಂದಿರುವುದು ಅವರಿಗೆ ಬಹಳ ಕಷ್ಟವಾಗುತ್ತದೆ

ಗಣೇಶ ಸ್ಪೀಕ್ಸ್ ಅವರ ಭವಿಷ್ಯವಾಣಿ ಪ್ರಕಾರ ಮಂಗಳ ಮತ್ತು ಬುಧದ ಸಂಯೋಗವು ಅವರ ವೃತ್ತಿಜೀವನದ ಜಾತಕದ ಪ್ರಕಾರ ಸುಲಭವಾಗಿ ವಿಕೆಟ್ಗಳನ್ನು ತೆಗೆದುಕೊಳ್ಳಲು ಉತ್ತಮ ವೇಗ ಮತ್ತು ತಾಂತ್ರಿಕ ಕೌಶಲ್ಯಗಳನ್ನು ನೀಡುತ್ತದೆ

ಇನ್ನು 3ನೇ ಮನೆಯಲ್ಲಿ ಇರುವ ರಾಹು ಅವರನ್ನು ಧೈರ್ಯಶಾಲಿ ವ್ಯಕ್ತಿತ್ವವನ್ನಾಗಿ ಮಾಡುತ್ತದೆ ಮತ್ತು ಅವರು ಜೀವನದಲ್ಲಿ ಅಪಾಯಗಳನ್ನು ತೆಗೆದುಕೊಳ್ಳಲು ಹೆದರುವುದಿಲ್ಲ

ಹಾಗೆಯೇ, ಅವರು ವೈಯಕ್ತಿಕ ಜೀವನದಲ್ಲಿ ಸಂಗಾತಿಯ ಜೊತೆ ಅತಿಯಾದ ಬಾಂಧವ್ಯ ಹೊಂದಿದ್ದಾರೆ

4 ನೇ ಮನೆಯ ಮೂಲಕ ಶನಿ ಸಾಗುವಿಕೆಯು ಹಾರ್ದಿಕ್ ಪಾಂಡ್ಯ ಅವರ ವೃತ್ತಿಜೀವನದಲ್ಲಿ ಸ್ಥಿರತೆಯನ್ನು ನೀಡುತ್ತದೆ

ಅವರು ಹೆಚ್ಚು ಜವಾಬ್ದಾರಿಯುತ ವ್ಯಕ್ತಿಯಾಗುತ್ತಾರೆ. ಗುರುವು ಪ್ರಸ್ತುತ 2 ನೇ ಮನೆಯ ಮೂಲಕ ಮತ್ತು ಜನ್ಮ ಬುಧ ಮತ್ತು ಮಂಗಳ ಇದ್ದು ಇದು ವೃತ್ತಿ ಜೀವನಕ್ಕೆ ಲಾಭದಾಯಕವಾಗಿರುತ್ತದೆ

ಶಾಕ್ ಕೊಟ್ಟ WHATSAPP, ಇನ್ಮುಂದೆ ಈ ಫೋನ್​ಗಳಲ್ಲಿ ಆ್ಯಪ್​ ಕಾರ್ಯ ನಿರ್ವಹಿಸಲ್ಲ!