ಭಾರತ ತಂಡದಲ್ಲಿ ಸ್ಟಾರ್ ಆಟಗಾರನಿಂದ ನಾಯಕನಾಗಿ ಟೀಂ ಇಂಡಿಯಾಕ್ಕೆ ಅಮೂಲ್ಯ ಗೆಲುವುಗಳನ್ನು ತಂದುಕೊಟ್ಟಿರುವ ಜಾರ್ಖಂಡ್ ಹೀರೋ ಈಗ ತಮ್ಮ ಲುಕ್ ಅನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ

ಬಾಲಿವುಡ್ ಹೀರೋ ಸ್ಟೈಲ್ ನಲ್ಲಿ ಫೋಟೋಶೂಟ್ ಮಾಡಿದ್ದಾರೆ

ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರು ಕೇಳಿದರೆ ಮೊದಲು ನೆನಪಾಗುವುದು ಅವರ ರೇಷ್ಮೆಯಂತಹ ಕೂದಲು

ಧೋನಿ ಭಾರತ ತಂಡಕ್ಕೆ ಪ್ರವೇಶದ ಸಮಯದಲ್ಲಿ ಉದ್ದನೆಯ ಕೂದಲಿನೊಂದಿಗೆ ಸ್ಟೈಲಿಶ್ ಆಟಗಾರನಾಗಿ ತಮ್ಮ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ

ಭಾರತ ತಂಡ ಮಾತ್ರವಲ್ಲದೆ ಐಪಿಎಲ್ ನಲ್ಲೂ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದಾರೆ

ಧೋನಿ ಲುಕ್ ಮತ್ತು ಹೇರ್ ಸ್ಟೈಲ್ ಬದಲಾವಣೆಯ ಫೋಟೋಗಳು ಇದೀಗ ನೆಟ್‌ನಲ್ಲಿ ವೈರಲ್ ಆಗುತ್ತಿವೆ

ಎಂಎಸ್ ಧೋನಿ ಅವರ ಇತ್ತೀಚಿನ ಚಿತ್ರಗಳ ಬಗ್ಗೆ ಅಭಿಮಾನಿಗಳ ಪ್ರತಿಕ್ರಿಯೆ ಮತ್ತು ಕಾಮೆಂಟ್‌ಗಳು ಸಾವಿರಾರು ಸಂಖ್ಯೆಯಲ್ಲಿ ಬರುತ್ತಿವೆ

ಮಹೇಂದ್ರ ಸಿಂಗ್ ಧೋನಿ ಅವರನ್ನು ಅಂತಹ ಸ್ಟೈಲಿಶ್ ಲುಕ್‌ಗೆ ಪರಿವರ್ತಿಸಿದ್ದು ಬೇರೆ ಯಾರೂ ಅಲ್ಲ, ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಅಲೀಮ್ ಹಕೀಮ್. ಆದರೆ ಅದೇ ಹೇರ್ ಸ್ಟೈಲ್ ಅನ್ನು ನಿಯಮಿತವಾಗಿ ನಿರ್ವಹಿಸುವ ಅಭ್ಯಾಸ ಧೋನಿಗೆ ಇಲ್ಲ

 ಅದಕ್ಕಾಗಿಯೇ ಅವರು ಕೆಲವೊಮ್ಮೆ ಬೇರೆ ಬೇರೆ ಹೇರ್‌ ಸ್ಟೈಲ್‌ ಮಾಡುತ್ತಿರುತ್ತಾರೆ. ಹೇರ್ ಸ್ಟೈಲ್ ಬದಲಾಯಿಸುವುದು ಧೋನಿಗೆ ಹೊಸದೇನಲ್ಲ. ಇಲ್ಲಿಯವರೆಗೆ, ಅವರು ಹಲವಾರು ವಿಭಿನ್ನ ಹೇರ್ ಸ್ಟೈಲ್‌ಗಳಿಂದ ತಮ್ಮ ಅಭಿಮಾನಿಗಳನ್ನು ಥ್ರಿಲ್ ಮಾಡಿದ್ದಾರೆ

ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಕೂಡ ತಮ್ಮ ಹೇರ್ ಸ್ಟೈಲ್ ಅನ್ನು ಅಲೀಮ್ ಹಕೀಮ್ ಅವರ ಬಳಿ ಮಾಡಿಸಿದ್ದರು. ಕೆಎಲ್ ರಾಹುಲ್, ರಜನಿಕಾಂತ್‌ ಸೇರಿದಂತೆ ಅನೇಕ ದಿಗ್ಗಜರು ಅವರ ಬಳಿಕ ಕಟಿಂಗ್‌ ಮಾಡಿಸಿಕೊಳ್ಳುತ್ತಾರೆ

ರೋಹಿತ್‌ ಶರ್ಮಾ ಬೌಲಿಂಗ್‌ ಬಿಟ್ಟಿದ್ದು ಇದೇ ಕಾರಣಕ್ಕಂತೆ!