ದೊಡ್ಮನೆಗೆ ಈ ಬಾರಿ ಹಿರಿಯ ನಟ ಜಗ್ಗೇಶ್ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು

ನಟ ಜಗ್ಗೇಶ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ ಹೋಗುವುದಿಲ್ಲವೆಂದು ನೆಟ್ಟಿಗರು ಸುದ್ದಿಗಳಿಗೆ ಕಾಮೆಂಟ್ ಕೂಡ ಮಾಡಿದ್ದರು

ಇದೀಗ ಸ್ವತಃ ನಟ ಜಗ್ಗೇಶ್ ಅವರೇ ಈ ಸುದ್ದಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಬಿಗ್ ಬಾಸ್ ಮನೆಗೆ ಹೋಗುತ್ತಿದ್ದೇನೆ ಎನ್ನುವುದು ಸತ್ಯಕ್ಕೆ ದೂರವಾದ ವಿಷಯ

ನನ್ನ ಅಭಿಮಾನಿಗಳ ಮಾಹಿತಿಗಾಗಿ’ ಎಂದು ಜಗ್ಗೇಶ್ X (ಟ್ವಿಟರ್)ನಲ್ಲಿ ಬರೆದುಕೊಂಡಿದ್ದಾರೆ

ಬಿಗ್ ಬಾಸ್ ಸೀಸನ್ 10 ಆಟ ಶುರುವಾಗಲು ಒಂದು ದಿನ ಬಾಕಿಯಿದ್ದು, ಈ ಬಾರಿ ದೊಡ್ಮನೆ ಆಟದಲ್ಲಿ ಯಾರೆಲ್ಲಾ ಭಾಗಿಯಾಗಲಿದ್ದಾರೆ ಎಂಬುದರ ಮತ್ತೊಂದು ಸಂಭಾವ್ಯ ಸ್ಪರ್ಧಿಗಳ ಲಿಸ್ಟ್ ಹರಿದಾಡುತ್ತಿದೆ

ಅಕ್ಟೋಬರ್ 8ಕ್ಕೆ ಬಿಗ್ ಬಾಸ್ ಗ್ರ್ಯಾಂಡ್ ಓಪ್‌ನಿಂಗ್‌ಗೆ ಸಾಕಷ್ಟು ತಯಾರಿ ನಡೆಯುತ್ತಿದ್ದು, ಈಗ ಮತ್ತೆ ಒಂದಿಷ್ಟು ಹೊಸ ಸ್ಪರ್ಧಿಗಳ ಹೆಸರು ವೈರಲ್ ಆಗುತ್ತಿದೆ

ದೊಡ್ಮನೆಗೆ ಆಟಕ್ಕೆ ಮೊದಲ ಸ್ಪರ್ಧಿಯಾಗಿ ‘777 ಚಾರ್ಲಿ’ ಎಂಟ್ರಿ ಕೊಡುವ ವಿಚಾರ ಅಧಿಕೃತವಾಗಿ ಹೊರಬಿದ್ದಿದೆ

ನಟ ಸುನೀಲ್ ರಾವ್, ಭವ್ಯಾ ಗೌಡ, ರಘು ಮುಖರ್ಜಿ, ಸಮಾಜ ಸೇವಕಿ ಅಕ್ಕ ಅನು, ಪ್ರಕಾಶ್ ತುಮ್ಮಿನಾಡು, ರಂಜನಿ ರಾಘವನ್, ಹುಲಿ ಕಾರ್ತಿಕ್, ನಮ್ರತಾ ಗೌಡ, ಚಂದ್ರಪ್ರಭ, ಅಗ್ನಿಸಾಕ್ಷಿ ಖ್ಯಾತಿಯ ರಾಜೇಶ್ ಧ್ರುವ, ‘ಕೆಜಿಎಫ್’ ನಟಿ ರೂಪಾ ರಾಯಪ್ಪ, ಮಿಮಿಕ್ರಿ ಗೋಪಿ, ಕ್ರಿಕೆಟರ್ ವಿನಯ್ ಕುಮಾರ್, ಪೋಷಕ ನಟಿ ಸ್ವಾತಿ, ರಕ್ಷಕ್ ಬುಲೆಟ್ ಪ್ರಕಾಶ್, ರ‍್ಯಾಪರ್ ಇಶಾನಿ ಸೇರಿದಂತೆ ಹಲವರು ಬಿಗ್ ಬಾಸ್ ಸ್ಪರ್ಧಿಸುವ ಸ್ಯಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ

ಏನಿದು ದೇಶಾದ್ಯಂತ ಟ್ರೆಂಡ್‌ ಆಗ್ತಿರೋ 75 ಡೇ ಹಾರ್ಡ್ ಚಾಲೆಂಜ್‌? ನೀವೂ ಒಮ್ಮೆ ಟ್ರೈ ಮಾಡಿ!

ಬಿಗ್ ಬಾಸ್ ಕನ್ನಡ ಸೀಸನ್ 10ಕ್ಕೆ ದಿನಗಣನೆ ಶುರುವಾಗಿದೆ

ಈಗಾಗಲೇ ಹಲವು ಪ್ರೋಮೋಗಳನ್ನು ರಿಲೀಸ್ ಮಾಡುವ ಮೂಲಕ ವಾಹಿನಿಯು ಪ್ರೇಕ್ಷಕರಲ್ಲಿ ಕುತೂಹಲವನ್ನುಂಟು ಮಾಡುತ್ತಿದೆ

ಈಗಾಗಲೇ ಬಿಗ್ ಬಾಸ್ ಯಾವಾಗಿಂದ ಶುರುವಾಗುತ್ತದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದೆ. ಈಗ ಪ್ರಸಾರದ ವೇಳೆಯನ್ನೂ ಅದು ಹೇಳಿಕೊಂಡಿದೆ

ಅಕ್ಟೋಬರ್ 8ರಿಂದ ಪ್ರಾರಂಭವಾಗುವ ಬಿಗ್ ಬಾಸ್ ಶೋ, ಮೊದಲ ದಿನ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ

ನಾಳೆ ಬೆಳಿಗ್ಗೆ ಇದನ್ನೊಮ್ಮೆ ನೀವು ಟ್ರೈ ಮಾಡ್ಲೇಬೇಕು; ನೋಡೋಕು ಚಂದ - ತಿನ್ನೋಕು ರುಚಿ