ಸರ್ ರವೀಂದ್ರ ಜಡೇಜಾ, ಕ್ರಿಕೆಟ್​ ಅಭಿಮಾನಿಗಳ ಪಾಲಿನ ಫೇವರೇಟ್​ ಜಡ್ಡು

 ರವೀಂದ್ರ ಜಡೇಜಾ ಮೈದಾನದಲ್ಲಿ ಇದ್ದರೆ ಅದೊಂಥರ ಜೀವಂತಿಕೆ. ಅವರೊಬ್ಬ ಚೈತ್ಯನ್ಯದ ಚಿಲುಮೆ ಎನ್ನಬಹುದು

ಸದ್ಯ ವಿಶ್ವಕಪ್ ಭಾರತದ ತಂಡದಲ್ಲಿ ಸಹ ಜಡ್ಡು ಇದ್ದು, ಜ್ಯೋತಿಷ್ಯದ ಪ್ರಕಾರ ಅವರ ಆಟ ಹೇಗಿರಲಿದೆ? ವಿಶ್ವಕಪ್ ಗೆಲ್ಲುವಲ್ಲಿ ಸಹಾಯ ಮಾಡ್ತಾರಾ? ಇಲ್ಲಿದೆ ಮಾಹಿತಿ

ಸೆಕೆಂಡ್​ಗಳನ್ನ ಎಣಿಸುವಷ್ಟರಲ್ಲಿ ಸರಸರನೆ ಓವರ್ ಬೌಲಿಂಗ್ ಮಾಡುವ ಜಡ್ಡು, ಬ್ಯಾಟಿಂಗ್​ನಲ್ಲಿ ಸಹ ಅಬ್ಬರಿಸುವ ಪ್ರತಿಭೆ ಎನ್ನಬಹುದು. ಟಿ20, ಓಡಿಐ ಮತ್ತು ಟೆಸ್ಟ್ ಈ ಮೂರು ಮಾದರಿ ಕ್ರಿಕೆಟ್​ನಲ್ಲೂ ರವೀಂದ್ರ ಜಡೇಜಾ ತಮ್ಮ ಛಾಪು ಮೂಡಿಸಿದ್ದಾರೆ

ಧೋನಿಯನ್ನು ಅಪ್ಪಿಕೊಂಡು ಕೆನ್ನೆಗೆ ಮುತ್ತಿಟ್ಟ ಬಾಲಿವುಡ್ ಸ್ಟಾರ್!

ಈ ಬಾರಿಯ ವಿಶ್ವಕಪ್ ತಂಡದಲ್ಲಿ ಇರುವ ಜಡೇಜಾ ಅವರ ಭವಿಷ್ಯ ಹೇಗಿರಲಿದೆ. ಜಾತಕದ ಪ್ರಕಾರ ಅವರ ಮುಂದಿನ ದಿನಗಳು ಹೇಗಿರುತ್ತದೆ ಎಂಬೆಲ್ಲಾ ಮಾಹಿತಿ ಇಲ್ಲಿದ್ದು, ಅವರ ಮೇಲೆ ಯಾವ ಗ್ರಹಗಳ ಪರಿಣಾಮ ಹೆಚ್ಚಿದೆ ಹಾಗೂ ಇದರಿಂದ ಭಾರತದ ತಂಡದ ಮೇಲೆ ಯಾವ ಪ್ರಭಾವ ಆಗುತ್ತದೆ ಎಂಬುದು ಸಹ ಇದೆ

ರವೀಂದ್ರ ಜಡೇಜಾ ಹುಟ್ಟಿದ್ದು 06 ಡಿಸೆಂಬರ್ 1988 ರಂದು ಗುಜರಾತ್​ನ ಜಾಮ್ನಗರನಲ್ಲಿ

 ರವೀಂದ್ರ ಜಡೇಜಾ ಅವರ ಜನ್ಮ ದಿನಾಂಕದ ಪ್ರಕಾರ ಅವರದ್ದು ಧನು ರಾಶಿ ಆಗಿದೆ. ರವೀಂದ್ರ ಜಡೇಜಾ ಶನಿಯ ಮಹಾದಶಾ ಮತ್ತು ಕೇತುವಿನ ಅಂತರದಶಾ ಪ್ರಭಾವಕ್ಕೆ ಒಳಗಾಗಿದ್ದರು

2023 ರ ರವೀಂದ್ರ ಜಡೇಜಾ ಜಾತಕದ ಪ್ರಕಾರ ಗ್ರಹಗಳು ಮತ್ತು ನಕ್ಷತ್ರಪುಂಜಗಳನ್ನು ನೋಡಿದಾಗ, ಹೊಸ ಜವಾಬ್ದಾರಿಯೊಂದು ಬರುವ ಸೂಚನೆಗಳಿವೆ

ಜಸ್ಪ್ರೀತ್ ಜಾತಕ ಹೀಗಿದೆ

2023 ರಲ್ಲಿ 4 ಗ್ರಹಗಳ ಸಂಚಾರವು ಜಡೇಜಾ ಜೀವನದಲ್ಲಿ ಪ್ರಮುಖ ಬದಲಾವಣೆಗಳನ್ನು ತರುತ್ತದೆ

ಇವರ ಜೀವನದಲ್ಲಿ ಶುಭ ಸಮಯ ಏಪ್ರಿಲ್ 2023 ರಿಂದ ಆರಂಭವಾಗಿದ್ದು, ಆಟದಲ್ಲಿ ಅಬ್ಬರತೆ ಇರಲಿದೆ. ಇನ್ನು ಈ ವರ್ಷ ಅವರು ವೈಯಕ್ತಿಕ ಅಥವಾ ವೃತ್ತಿಪರ ಜೀವನದಲ್ಲಿ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬಹುದು

ಅಕ್ಟೋಬರ್ 2023 ರ ನಂತರ ಮಂಗಳಕರ ಸಮಯವಿರುತ್ತದೆ ಎಂದು ಅವರ ಜಾತಕ ತೋರಿಸುತ್ತಿದ್ದು, ಅದರ ಅನುಸಾರ ಈ ಬಾರಿಯ ವಿಶ್ವಕಪ್​ನಲ್ಲಿ ಅವರು ಭರ್ಜರಿ ಪ್ರದರ್ಶನ ತೋರಿಸಲಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ

ಪಂದ್ಯದ ಸಮಯದಲ್ಲಿ ತಾಳ್ಮೆ ವಹಿಸಿದರೆ ಭಾರತ ವಿಶ್ವಕಪ್ ಗೆಲ್ಲುವಲ್ಲಿ ಇವರ ಕೈ ಮೇಲಿರುತ್ತದೆ. ಆದರೆ ಈ ಸಮಯದಲ್ಲಿ ಸ್ವಲ್ಪ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು

ಅದ್ಭುತವಾಗಿದೆ ರೋಹಿತ್‌-ರಾಹುಲ್‌ ರೆಕಾರ್ಡ್ಸ್‌!