ಶಕ್ತಿ ದೇವತೆಗೆ ಹೂ ಅಲಂಕಾರದ ಪೂಜೆ; ಮಿರ ಮಿರ ಮಿಂಚಿದ ಶಾಂತಿಕಾ ಪರಮೇಶ್ವರಿ!

 ಒಂದೆಡೆ ವಿವಿಧ ಬಗೆಯ ಹೂವುಗಳಿಂದ ಸಿಂಗಾರಗೊಂಡಿರುವ ದೇವರು

ಇನ್ನೊಂದೆಡೆ ಪುಷ್ಪಾಲಂಕಾರ ಭೂಷಿತೆಯಾಗಿ ಕಂಗೊಳಿಸುತ್ತಿರುವ ದೇವಿಯ ಮೂರ್ತಿ

ಮತ್ತೊಂದೆಡೆ ಕಣ್ಮನ ಸೆಳೆಯುತ್ತಿರುವ ಹೂವಿನ ಅಲಂಕಾರವನ್ನ ಕಣ್ತುಂಬಿಕೊಳ್ಳುತ್ತಿರುವ ಭಕ್ತರು

ಅಂದಹಾಗೆ ಈ ಎಲ್ಲ ದೃಶ್ಯಗಳು ಕಂಡುಬಂದಿದ್ದು ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ

ಭಾದ್ರಪದ ಮಾಸದಂದು ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ತಲೆತಲಾಂತರದಿಂದ ಹೂವಿನ ಅಲಂಕಾರ ಪೂಜೆಯನ್ನ ನೆರವೇರಿಸುತ್ತಾ ಬರಲಾಗಿದೆ

ಮೋಡಿ ಮಾಡುವ ಕಲೆ, ಲಾವಂಚದ ಕಲಾಕೃತಿಗಳ ಜಾದುಗಾರ ಇವರೇ ನೋಡಿ

ಹೂವಿನ ಅಲಂಕಾರದ ಮಂಟಪದಲ್ಲಿ ದೇವಿ ವಿರಾಜಮಾನಳಾಗಿ ಭಕ್ತರಿಗೆ ಅಭಯ ನೀಡುತ್ತಾಳೆ

ಈ ವೇಳೆ ನೂರಾರು ಸಂಖ್ಯೆಯ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ

ದೇವಸ್ಥಾನದ ಆಡಳಿತ ಮಂಡಳಿಯ ಜೊತೆಗೆ ಭಕ್ತರು ಸೇರಿ ದೇವಸ್ಥಾನದ ಮಂಟಪಕ್ಕೆ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಿದ್ದು,‌ ನೋಡಲು ಎರಡು ಕಣ್ಣು ಸಾಲದು

ಕರ್ನಾಟಕದಿಂದ ವೆಂಕಟೇಶ್ವರನ ದರ್ಶನ ಇನ್ನಷ್ಟು ಸುಲಭ!

ಕುಮಟಾ ಪಟ್ಟಣದಲ್ಲಿರುವ ಶಾಂತಿಕಾ ಪರಮೇಶ್ವರಿ ದೇವಿ ಶಕ್ತಿ ದೇವತೆಯೆಂದೇ ಖ್ಯಾತಿ ಪಡೆದಿದ್ದಾಳೆ

 ಮನಸ್ಸಿನಲ್ಲಿ ಅಂದುಕೊಂಡಿದ್ದನ್ನ ಈ ದೇವಿ ಈಡೇರಿಸುತ್ತಾಳೆ ಎನ್ನುವ ನಂಬಿಕೆ ಇಲ್ಲಿನ ಭಕ್ತರದ್ದು

ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುವ ಹೂವಿನ ಅಲಂಕಾರ ಪೂಜೆ ವಿಶೇಷವಾಗಿದ್ದು, ಬೇರೆ ದೇವಸ್ಥಾನಗಳಲ್ಲಿ ಇಂತಹ ಅಲಂಕಾರ ನೋಡಲು ಸಿಗುವುದಿಲ್ಲ ಅನ್ನೋದು ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಅಭಿಪ್ರಾಯವಾಗಿದೆ

 ಸೀಮಿ ನಾಗನಾಥ ದೇಗುಲದಲ್ಲಿ ವಿಸ್ಮಯಗಳ ಸರಣಿ