ಆಶ್ಲೇಷ ಬಲಿ ಎಂದಾಗ ನೆನಪಾಗೋದೆ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ. ಇದೇ ಕ್ಷೇತ್ರದಲ್ಲಿ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರಿಂದ ಹಿಡಿದು ಅದೆಷ್ಟೋ ಗಣ್ಯರು ನಾಗ ಸರ್ಪ ಸಂಸ್ಕಾರಗಳನ್ನ ನೆರವೇರಿಸಿಕೊಂಡಿದ್ದಾರೆ

ಹಾಗಿದ್ರೆ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಆಶ್ಲೇಷ ಬಲಿ ಸೇವೆಯು ಯಾಕೆ ಪ್ರಸಿದ್ಧಿ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ

ನಾಗದೋಷ ನಿವಾರಣೆಯ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಕುಕ್ಕೆ ಸುಬ್ರಹ್ಮಣ್ಯ ಲಕ್ಷಾಂತರ ಭಕ್ತಾಧಿಗಳನ್ನು ತನ್ನತ್ತ ಸೆಳೆಯಲೂ ಇದೊಂದು ಕಾರಣವೂ ಆಗಿದೆ

ನಾಗದೋಷ ನಿವಾರಣೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರಮುಖವಾಗಿ ಸರ್ವ ಸಂಸ್ಕಾರ ದೋಷ, ನಾಗಪ್ರತಿಷ್ಠೆ, ಆಶ್ಲೇಷ ಬಲಿ ಪೂಜೆ ಪ್ರಮುಖವಾಗಿದೆ

ಆಶ್ಲೇಷ ಬಲಿ ಎಂದಾಗ ನೆನಪಾಗೋದೆ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ. ಇದೇ ಕ್ಷೇತ್ರದಲ್ಲಿ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರಿಂದ ಹಿಡಿದು ಅದೆಷ್ಟೋ ಗಣ್ಯರು ನಾಗ ಸರ್ಪ ಸಂಸ್ಕಾರಗಳನ್ನ ನೆರವೇರಿಸಿಕೊಂಡಿದ್ದಾರೆ

ಇವುಗಳಲ್ಲಿ ಆಶ್ಲೇಷ ಬಲಿ ಪೂಜೆ ಅತ್ಯಂತ ಸರಳವೂ, ಅತ್ಯಂತ ಪ್ರಭಾವಿಯೂ ಆಗಿದೆ

ಪ್ರತಿ ವರ್ಷ ಅದೆಷ್ಟೋ ಜನ ಆಶ್ಲೇಷ ಬಲಿ ಸೇವೆಯನ್ನ ನೆರವೇರಿಸುತ್ತಾ ಬಂದಿದ್ದಾರೆ. ಇಡೀ ಭೂಲೋಕವೇ ಆದಿಶೇಷನ ಮೇಲೆ ನಿಂತಿದೆ ಎನ್ನುವುದು ಹಿಂದೂ ಧರ್ಮದ ಆಸ್ತಿಕರ ನಂಬಿಕೆಯಾಗಿದೆ

ಆದ್ದರಿಂದ ಒಬ್ಬ ವ್ಯಕ್ತಿ ಒಂದಲ್ಲ ಒಂದು ರೀತಿಯಲ್ಲಿ ತಪ್ಪು ಮಾಡುವುದು ಸಹಜ. ಈ ಎಲ್ಲಾ ತಪ್ಪುಗಳ ಪ್ರಾಯಶ್ಚಿತಕ್ಕಾಗಿ ಆಶ್ಲೇಷ ಬಲಿ ಪೂಜೆ ಪರಿಹಾರವನ್ನು ನೀಡುತ್ತದೆ ಎನ್ನುವ ನಂಬಿಕೆಯಿದೆ

ಯಾರು ಮಾಡಬಹುದು? ನಾಗದೋಷ ಇದ್ದವರೇ ಆಶ್ಲೇಷ ಬಲಿ ಪೂಜೆ ಮಾಡಬೇಕೆನ್ನುವ ಯಾವ ನಿಯಮವೂ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿಲ್ಲ

ಯಾರು ಬೇಕಾದರೂ ಈ ಸೇವೆಯನ್ನು ತನ್ನ ಸಾಮರ್ಥ್ಯಕ್ಕೆ ಅನುಸಾರವಾಗಿ ತಿಂಗಳಿಗೊಮ್ಮೆಯೋ, ವರ್ಷಕ್ಕೊಮ್ಮೆಯೂ ಮಾಡಬಹುದಾಗಿದೆ

ಕರುನಾಡ ಹಬ್ಬದಲ್ಲಿ ವ್ಯಾಪಾರವೂ ಬಲು ಜೋರು!

ಯಾವುದಕ್ಕೆಲ್ಲ ಪರಿಹಾರ? ವ್ಯಕ್ತಿಯ ಜನ್ಮಕುಂಡಲಿಯಲ್ಲಿ ಕಾಳಸರ್ಪದೋಷ ಇರುವವರು, ರಾಹುದೆಸೆಯಲ್ಲಿ ನಡೆಯುವವರು ಕೆಲವು ದೋಷಗಳನ್ನು ಬದುಕಿನಲ್ಲಿ ಎದುರಿಸಬೇಕಾಗುತ್ತದೆ

ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಸಮಸ್ಯೆ, ವಿವಾಹ, ಭೂ,ಜಲ, ಬೆಳೆ ಅಭಿವೃದ್ಧಿಗಾಗಿ ಈ ಸೇವೆಯನ್ನು ಮಾಡಿದರೆ ಉತ್ತಮ ಎನ್ನುವ ನಂಬಿಕೆಯಿದೆ

ಆಶ್ಲೇಷ ಬಲಿ ಕ್ರಮ ಹೇಗೆ? ಆಶ್ಲೇಷ ಪೂಜೆಯಲ್ಲಿ ಮಂಡಲ ಹಾಕಿ ನಾಗಗಳನ್ನು ಸಂತೃಪ್ತಿಗೊಳಿಸಲಾಗುತ್ತದೆ. 84 ಕುಲ ನಾಗಗಳಿಗೆ ಪಿಂಡ ಬಲಿ, ತರ್ಪಣ, ಅರ್ಜನೆ, ಫಲಪುಷ್ಪಗಳನ್ನು ಅರ್ಪಣೆ ಮಾಡುವ ಮೂಲಕ ನಾಗನನ್ನು ಸಂತೃಪ್ತಿಗೊಳಿಸಲಾಗುತ್ತದೆ

ಬಹುತೇಕ ಎಲ್ಲಾ ನಾಗಕ್ಷೇತ್ರಗಳಲ್ಲಿ ಆಶ್ಲೇಷ ಬಲಿ ಪೂಜೆ ಮಾಡಲಾಗುತ್ತಿದ್ದರೂ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಡುವ ಆಶ್ಲೇಷಬಲಿ ಪೂಜೆಗೆ ವಿಶೇಷ ಮಹತ್ವವಿದೆ

ಮಸೀದಿ ಉದ್ಘಾಟಿಸಿದ ವೀರಶೈವ ಸ್ವಾಮೀಜಿ