ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಶಾರುಖ್ ಮಗಳು ಸುಹಾನಾ ಖಾನ್, ಆಗಾಗ ಚೆಂದದ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸುಹಾನಾ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ
ಬಾಲಿವುಡ್ ಟಾಪ್ ಸೆಲೆಬ್ರಿಟಿ ಸ್ಟಾರ್ ಕಿಡ್ಗಳಲ್ಲಿ ಒಬ್ಬರಾಗಿರುವ ಸುಹಾನಾ ಖಾನ್ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ನಟಿ ಯಾವುದೇ ಸಿನಿಮಾ ಮಾಡುವ ಮೊದಲೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ
ಸುಹಾನಾ ಅಭಿನಯದ ಡಿಬಟ್ ಮೂವಿ ಆರ್ಚೀಸ್ ಕೂಡಾ ಸೆಟ್ಟೇರಿದೆ. ಆ ಸಿನಿಮಾ ಇನ್ನೂ ರಿಲೀಸ್ ಕೂಡಾ ಆಗಿಲ್ಲ. ಆಗಲೇ ಸುಹಾನಾ ಖಾನ್ಗೆ ಟಾಪ್ ಬ್ರ್ಯಾಂಡ್ನಿಂದ ಡೀಲ್ ಬಂದಿದೆ. ನಟಿ ಟಾಪ್ ಕಾಸ್ಮೆಟಿಕ್ ಬ್ರ್ಯಾಂಡ್ ಮೆಬೆಲಿನ್ ರಾಯಭಾರಿಯಾಗಿದ್ದಾರೆ