ಸದ್ಯ ಮರಿ ಹಾಗೂ ನೇತ್ರಾವತಿ ಆನೆಯ ಆರೋಗ್ಯ ಚೆನ್ನಾಗಿದೆ

ಸ್ಥಳಕ್ಕೆ ಡಿಎಫ್ಓ ಪ್ರಸನ್ನ ಪಟಗಾರ್, ವನ್ಯಜೀವಿ ವೈದ್ಯ ಡಾ. ವಿನಯ್ ಭೇಟಿ ನೀಡಿದ್ದಾರೆ

ರಾಜ್ಯದ ಎರಡನೇ ಅತಿದೊಡ್ಡ ದಸರಾ ಎಂದು ಖ್ಯಾತಿ ಪಡೆದಿರುವ ಶಿವಮೊಗ್ಗ ದಸರಾ ಜಂಬೂ ಸವಾರಿಗೆ ಬಂದಿದ್ದ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ

ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದ್ದು, ಶಿವಮೊಗ್ಗ ನಗರದ ವಾಸವಿ ಶಾಲೆ ಆವರಣದಲ್ಲಿ ಮರಿಯಾನೆಗೆ ನೇತ್ರಾವತಿ ಜನ್ಮ ನೀಡಿದೆ

ನಿನ್ನೆ ರಾತ್ರಿ ವೇಳೆ ನೇತ್ರಾವತಿ ಆನೆ ಮರಿಗೆ ಜನ್ಮ ನೀಡಿದೆ

ಶಿವಮೊಗ್ಗದ ಜಂಬೂಸವಾರಿ ಅಂತ ನೇತ್ರಾವತಿ ಆನೆ ಕರೆತರಲಾಗಿತ್ತು

ಅಂಬಾರಿ ಹೊರುವ ಸಾಗರ್ ಆನೆ ಜೊತೆಗೆ ಕುಮ್ಕಿ ಆನೆಗಳಾಗಿ ನೇತ್ರಾ ಹಾಗೂ ಹೇಮಾವತಿ ಆನೆ ತರಲಾಗಿತ್ತು

ಶಿವಮೊಗ್ಗದ ಸಕ್ರೇಬೈಲು ಆನೆ ಬಿಡಾರದಿಂದ ಹೇಮಾವತಿ ಆನೆ ಸೇರಿದಂತೆ ಮೂರು ಆನೆಗಳನ್ನು ಕರೆತರಲಾಗಿತ್ತು. ಕಳೆದ 4 ನಾಲ್ಕು ದಿನದಿಂದ ಆನೆಗಳಿಗೆ ನಿರಂತರ ತಾಲೀಮು ಕೊಡಿಸಲಾಗಿತ್ತು

ವಿಶ್ವವಿಖ್ಯಾತ ಜಂಬೂ ಸವಾರಿ ಮೆರವಣಿಗೆ- ಅರಮನೆ ಆವರಣದಲ್ಲಿ ಸಕಲ ಸಿದ್ಧತೆ

ನಿನ್ನೆ ಸಂಜೆ ಕೂಡ ತಾಲೀಮು ಪ್ರಕ್ರಿಯೆಯಲ್ಲಿ ನೇತ್ರಾವತಿ ಆನೆ ಭಾಗಿಯಾಗಿತ್ತು

ಸದ್ಯ ಮರಿ ಹಾಗೂ ನೇತ್ರಾವತಿ ಆನೆಯ ಆರೋಗ್ಯ ಚೆನ್ನಾಗಿದೆ. ಸ್ಥಳಕ್ಕೆ ಡಿಎಫ್ಓ ಪ್ರಸನ್ನ ಪಟಗಾರ್, ವನ್ಯಜೀವಿ ವೈದ್ಯ ಡಾ. ವಿನಯ್ ಭೇಟಿ ನೀಡಿದ್ದಾರೆ

ಮೈಸೂರು ದಸರಾಗೆ ಆನೆ ಆಯ್ಕೆ ವೇಳೆ ಸಕ್ರೇಬೈಲಿನಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ನಡೆಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ

ಹುಲಿಕುಣಿತ ನೋಡಿ ನಿಬ್ಬೆರಗಾದ ಟೀಂ ಇಂಡಿಯಾ ಮಾಜಿ ಆಟಗಾರ ಹರ್ಭಜನ್ ಸಿಂಗ್