ಉಪ್ಪು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ

ಹಾಗಾಗಿ ಅನೇಕ ಮಂದಿ ಚಿಪ್ಸ್, ಫ್ರೆಂಚ್ ಫ್ರೈಸ್, ಕಟ್ಲೆಟ್ಗಳು ಮತ್ತು ಗೋಲ್ ಗಪ್ಪಾಗಳನ್ನು ತಿನ್ನಲು ಬಹಳ ಇಷ್ಟಪಡುತ್ತಾರೆ

ಆದರೆ ಇವುಗಳಲ್ಲಿ ಬಹಳಷ್ಟು ಸೋಡಿಯಂ ಅಂಶವಿರುತ್ತದೆ

ಇದು ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತದೆ

ಕೆಲಸ ಮಾಡೋವಾಗ ಪದೇ ಪದೇ ಹಸಿವು ಆಗ್ತಿದ್ರೆ ಏನು ಮಾಡಬೇಕು?

ಅಲ್ಲದೇ ಅತಿಯಾದ ಉಪ್ಪಿನ ಸೇವನೆ ಈ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು

ಉಪ್ಪಿನಲ್ಲಿರುವ ಸೋಡಿಯಂ ರಕ್ತದೊತ್ತಡವನ್ನು ಹೆಚ್ಚಿಸಬಹುದು, ಇದು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ

ತೂಕ ಹೆಚ್ಚಾಗುತ್ತದೆ: ಹೆಚ್ಚು ಉಪ್ಪು ಪದಾರ್ಥಗಳನ್ನು ಸೇವಿಸುವುದರಿಂದ ನಿಮ್ಮ ದೇಹವು ಹೆಚ್ಚುವರಿ ನೀರಿನಿಂದ ತುಂಬುತ್ತದೆ. ಇದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು

ಹೃದಯದ ಆರೋಗ್ಯ: ಅತಿಯಾದ ಉಪ್ಪು ಸೇವನೆಯು ಹೃದಯದ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ

ಪ್ರತಿದಿನ ಕರಿಮೆಣಸು ತಿಂದ್ರೆ ತೂಕ ಇಳಿಯುವುದಷ್ಟೇ ಅಲ್ಲ, ಬೊಜ್ಜು ಬೇಗ ಕರಗುತ್ತೆ!

ಮೂಳೆಗಳಿಗೆ ಹಾನಿ: ಮಿತಿಗಿಂತ ಹೆಚ್ಚು ಉಪ್ಪು ಸೇವನೆಯು ಮೂಳೆಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡುತ್ತದೆ, 

ಇದು ಆಸ್ಟಿಯೊಪೊರೋಸಿಸ್ನಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ

ಹೊಟ್ಟೆಯ ಸಮಸ್ಯೆಗಳು: ಅತಿಯಾಗಿ ಉಪ್ಪುಸಹಿತ ಆಹಾರವನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸಮಸ್ಯೆಗಳಾದ ಅಸಿಡಿಟಿ, ಜಠರದುರಿತ ಮತ್ತು ಪೈಲ್ಸ್ ಇತ್ಯಾದಿಗಳು ಉಂಟಾಗಬಹುದು

ಮಾನಸಿಕ ಸಮಸ್ಯೆಗಳು: ಅತಿಯಾದ ಉಪ್ಪು ಸೇವನೆಯು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆತಂಕ ಮತ್ತು ಒತ್ತಡವನ್ನು ಹೆಚ್ಚಿಸುತ್ತದೆ

ಉಕ್ಕಿನಂತಹ ಮೂಳೆಗಳು ನಿಮ್ಮದಾಗಬೇಕಾ? ಹಾಗಾದ್ರೆ ಪ್ರತಿದಿನ ಡ್ರೈ ಫ್ರೂಟ್ಸ್​ ತಿನ್ನಿ ಸಾಕು!