ಈಗ ಈ ವಾತಾವರಣಕ್ಕೆ ತಕ್ಕಂತೆ ಬಾಯಿ ರುಚಿಸುವ ಒಂದು ಸ್ನ್ಯಾಕ್ಸ್ ರೆಸಿಪಿ ಮಾಡೋದು ಹೇಗೆ ಅಂತ ನೋಡೋಣ

ಇದು ಕೇವಲ 10 ನಿಮಿಷದ ರೆಸಿಪಿಯಾಗಿರುತ್ತೆ

ಮಕ್ಕಳೂ ಸಹ ಇಷ್ಟಪಟ್ಟು ತಿನ್ನುತ್ತಾರೆ

ಪ್ರತಿದಿನ ಬಿಸಿಲು-ಮಳೆ ಕಣ್ಣಾಮುಚ್ಚಾಲೆ ಆಡುತ್ತಿವೆ. ಬೆಳಗ್ಗೆ ಬಿಸಿಲು ಇದ್ದರೆ, ಮಧ್ಯಾಹ್ನ & ಸಂಜೆಯಾಗುವ ವೇಳೆಗೆ ಮಳೆರಾಯನ ಎಂಟ್ರಿಯಾಗಿರುತ್ತದೆ

ಈ ಚುಮು-ಚುಮು ಚಳಿಯಲ್ಲಿ ಬಿಸಿ-ಬಿಸಿಯಾಗಿ ಏನನ್ನಾದ್ರೂ ತಿನ್ನಬೇಕು ಅಂತ ನಾಲಿಗೆ ಬಯಸುತ್ತೆ

ಅದರಲ್ಲೂ ಸ್ಪೈಸಿಯಾಗಿ ಬಜ್ಜಿ ಅಥವಾ ಬೋಂಡ ಮಾಡಿದ್ರೆ ಇನ್ನೂ ಸಖತ್ತಾಗಿರುತ್ತೆ

ಬೇಬಿ ಕಾರ್ನ್ ಬಜ್ಜಿ: ಬೇಕಾಗುವ ಸಾಮಾಗ್ರಿಗಳು: ಬೇಬಿ ಕಾರ್ನ್ , ಕಡಲೆ ಹಿಟ್ಟು- 2 ಕಪ್, ಅಕ್ಕಿ ಹಿಟ್ಟು- 2 ಕಪ್, ಮೆಣಸಿನಕಾಯಿ ಪುಡಿ ,ಕಬಾಬ್ ಪೌಡರ್, ಜೀರಿಗೆ ಪುಡಿ, ಅಡುಗೆ ಸೋಡಾ ,ಇಂಗು, ಉಪ್ಪು & ಕರಿಯಲು ಎಣ್ಣೆ

ಮೊದಲಿಗೆ ಬೇಬಿ ಕಾರ್ನ್ ನ್ನು ಉದ್ದವಾಗಿ & ಸಣ್ಣದಾಗಿ ಕಟ್ ಮಾಡಿಕೊಳ್ಳಬೇಕು. ಅವುಗಳನ್ನು ಒಂದು ಬಟ್ಟಲಿಗೆ ಹಾಕಿ ಉಪ್ಪು, ಖಾರದ ಪುಡಿ & ಒಂದು ಚಮಚ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ

ಬಳಿಕ ಇನ್ನೊಂದು ಬಟ್ಟಲಿಗೆ ಮೇಲೆ ತಿಳಿಸಿರುವ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಇಂಗು, ಮೆಣಸಿನಕಾಯಿ ಪುಡಿ, ಕಬಾಬ್ ಪೌಡರ್, ಜೀರಿಗೆ ಪುಡಿ, ಅಡುಗೆ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು & ಒಂದು ಚಮಚ ಬಿಸಿ ಎಣ್ಣೆಯನ್ನು ಹಾಕಿ

ಎಷ್ಟು ಬೇಕೋ ಅಷ್ಟು ನೀರನ್ನು ಹಾಕಿಕೊಳ್ಳಿ. ನಂತರ ಹಿಟ್ಟನ್ನು ಕೈಯಿಂದ ಕಲಸಿ ಬೇಬಿ ಕಾರ್ನ್ ಗೆ ಹಿಟ್ಟು ಅಂಟುವ ಹದಕ್ಕೆ ರೆಡಿ ಮಾಡಿಟ್ಟುಕೊಳ್ಳಿ

ಒಲೆ ಮೇಲೆ ಒಂದು ಬಾಣಲಿಯಲ್ಲಿ ಎಣ್ಣೆಯನ್ನು ಇಟ್ಟು, ಬಿಸಿಯಾದ ಬಳಿಕ ಬೇಬಿ ಕಾರ್ನ್ ಸ್ಲೈಡ್ಸ್ ಗಳನ್ನು ಹಿಟ್ಟಿನಲ್ಲಿ ಅದ್ದಿ ಹಾಕಿ. ಬೆಂದ ಬಳಿಕ ಕಾಫಿ ಜೊತೆ ಬೇಬಿ ಕಾರ್ನ್ ಸರ್ವ್ ಮಾಡಿ