ಉತ್ತರ ಕನ್ನಡದಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ!

ಇದು ಅಂತಿಂತಹ ಕಾಳಿಂಗ ಅಲ್ಲ ಬರೋಬ್ಬರಿ 12 ಅಡಿ ಉದ್ದದ ಬೃಹತ್ ಕಾಳಿಂಗ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಈ ಬೃಹತ್ ಕಾಳಿಂಗ ಸರ್ಪವು ನೀರಿನ ದಾಹ ನೀಗಿಸಿಕೊಳ್ಳಲು ಬಾವಿಗೆ ಇಳಿದು ಬಿಟ್ಟಿತ್ತು

ಅದನ್ನು ರಕ್ಷಿಸಿದ ರೋಚಕ ಕಾರ್ಯಾಚರಣೆಯ ವರದಿ ಇಲ್ಲಿದೆ ನೋಡಿ

ಶಿರಸಿಯ ಹಳ್ಳಿಯೊಂದರ ತೋಟದ ಬಾವಿಗೆ ಇಳಿದಿದ್ದ ಈ ಬೃಹತ್ ಉರಗವನ್ನು ಸ್ನೇಕ್ ಪ್ರಶಾಂತ್ ಅವರು ಹಿಡಿದು ಮತ್ತೆ ಕಾಡಿಗೆ ಬಿಟ್ಟರು

ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಈ ಕಾರ್ಯಾಚರಣೆ ನಡೆಯಿತು

ಈಗ ವನದಲ್ಲಿನ ಪ್ರಾಣಿಗಳಿಗೆ ನೀರಿನ ಅಭಾವ ಉಂಟಾಗಿದ್ದು ದಾಹ ತೀರಿಸಿಕೊಳ್ಳಲು ಅವುಗಳು ಹೀಗೆ ಊರುಗಳಿಗೆ ಬರುತ್ತಿದ್ದಾವೆ

ಇಂತಹ ಸಂದರ್ಭದಲ್ಲಿ ಎದೆಗುಂದದೇ ಅವುಗಳನ್ನ ಸುರಕ್ಷಿತವಾಗಿ ಸ್ವಸ್ಥಾನಕ್ಕೆ ಬಿಡುವ ಪ್ರಯತ್ನವನ್ನು ತಜ್ಞರ ನೇತೃತ್ವದಲ್ಲಿ ನಾಗರಿಕರು ಮಾಡಬೇಕಿದೆ

Train News: ಮುಂಬೈ-ಹೊಸಪೇಟೆ ರೈಲು ಭಾಗಶಃ ರದ್ದು!