ರಾಜ್ಯಾದ್ಯಂತ ಉಷ್ಣಾಂಶ ಹೆಚ್ಚಾಗಿದೆ

ಉತ್ತರ ಒಳನಾಡು ಪ್ರದೇಶಗಳಲ್ಲಂತೂ ಚುನಾವಣೆ ಕಣ ಬಿಸಿ ಏರುತ್ತಿದ್ದಂತೆ, ವಾತಾರಣವೂ ಭಾರೀ ಬಿಸಿಯಾಗಿದೆ

ಈ ಮಧ್ಯೆಯ ಮುಂದಿನ ವಾರ 3 ದಿನಗಳ ಕಾಲ ಬಿಸಿಗಾಳಿ ಬೀಸುವ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಇಂದು ಬೆಳಗ್ಗೆಯೇ ಕಲಬುರಗಿಯಲ್ಲಿ ಗರಿಷ್ಠ 41.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ

Dog Show: ಹಾವೇರಿಯಲ್ಲಿ ವಿವಿಧ ತಳಿಯ ಶ್ವಾನಗಳ ಪ್ರದರ್ಶನ!

ಇದು ಈ ವರ್ಷ ಬೇಸಿಗೆಯ ಅತ್ಯಧಿಕ ಉಷ್ಣಾಂಶವಾಗಿದೆ

ಉಳಿದಂತೆ ಬಾಗಲಕೋಟೆ ಹಾಗೂ ರಾಯಚೂರಿನಲ್ಲಿ 40.4 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ

ಕೊಪ್ಪಳ, ವಿಜಯಪುರದಲ್ಲಿ 39 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ಉಷ್ಣಾಂಶ ದಾಖಲಾಗಿದೆ

ಈ ನಡುವೆ ಎಪ್ರಿಲ್‌ 3 ರಿಂದ 5 ರವರೆಗೆ ಬಿಸಿಗಾಳಿ ಬೀಸುವ ಎಚ್ಚರಿಕೆಯನ್ನ ಹವಾಮಾನ ಇಲಾಖೆ ನೀಡಿದೆ

Free Course: ಸಿಸಿಟಿವಿ ಅಳವಡಿಕೆ ತರಬೇತಿಗೆ ಅರ್ಜಿ ಆಹ್ವಾನ; ವಸತಿ, ಊಟದೊಂದಿಗೆ ಉಚಿತ ತರಬೇತಿ!

ಉತ್ತರ ಕರ್ನಾಟಕದ ಜಿಲ್ಲೆಗಳಾದ ಕಲಬುರಗಿ, ಬಾಗಲಕೋಟೆ, 

ರಾಯಚೂರು, ಕೊಪ್ಪಳ ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸುವ ಎಚ್ಚರಿಕೆಯನ್ನು ನೀಡಲಾಗಿದೆ

ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯ ನಡುವೆ ಇದರ ತೀವ್ರತೆ ಹೆಚ್ಚಿರಲಿದೆ

ಈ ಸಮಯದಲ್ಲಿ ಆದಷ್ಟು ಸೂರ್ಯನ ನೇರ ಕಿರಣಗಳಿಂದ, ಬಿಸಿಲಿನ ತೀವ್ರತೆಯಿಂದ ದೂರವಿರುವಂತೆ ಹವಾಮಾನ ಇಲಾಖೆ ತಿಳಿಸಿದೆ