ಬೆಳ್ತಂಗಡಿ ತಾಲೂಕಿನ ಇಂದಬೆಟ್ಟುವಿನ ಬಂಗಾಡಿ ಎಂಬಲ್ಲಿನ ಮನೆಗೆ ಬಂದಿದ್ದ 12 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ
ಉರಗ ರಕ್ಷಕ ಸ್ನೇಕ್ ಅಶೋಕ್ ಲಾಯಿಲ ರಕ್ಷಿಸಿದ್ದಾರೆ
ಈ ಮನೆಯ ಒಂದು ಪಾಶ್ರ್ವವನ್ನು ಮಾತ್ರ ಮನೆಮಂದಿ ಬಳಸುತ್ತಿದ್ದರು
ಕಾಳಿಂಗ ಸರ್ಪವು ಬಳಸದಿದ್ದ ಮತ್ತೊಂದು ಪಾಶ್ರ್ವದ ಕೋಣೆಯ ಮಂಚದ ಅಡಿಯಲ್ಲಿ ಬಂದಿತ್ತು
ಸೋಮವಾರ ಸಂಜೆ 5.30ರ ಸುಮಾರಿಗೆ ಯಾವುದೋ ಕಾರಣಕ್ಕೆ ಮನೆಯವರು ಆ ಕೋಣೆಯ ಬಾಗಿಲು ತೆಗೆದಾಗ ಮಂಚದಡಿಯಲ್ಲಿ ಏನೋ ಶಬ್ದವಾಗಿದೆ ಎಂದು ನೋಡಿದಾಗ ಬೃಹತ್ ಗಾತ್ರದ ಕಾಳಿಂಗ ಸರ್ಪ ಪತ್ತೆಯಾಗಿದೆ
ತಕ್ಷಣ ಮನೆಯವರು ಉರಗ ರಕ್ಷಕ ಅಶೋಕ್ ಲಾಯಿಲಾ ಅವರಿಗೆ ಕರೆ ಮಾಡಿದ್ದಾರೆ
ಅವರು ಮನೆಗೆ ಬಂದು ಕೇವಲ 10ನಿಮಿಷದಲ್ಲಿ ಹಾವನ್ನು ಹಿಡಿದು ರಕ್ಷಣೆ ಮಾಡಿದ್ದಾರೆ
ಇದೀಗ ಈ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ
Isha Ambani: ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳಿಗೂ ಸಿಗಲಿ ಪುರುಷರಷ್ಟೇ ಸಮಾನ ಪಾಲು: ಇಶಾ ಅಂಬಾನಿ