ಅರೆ! ಇದೇನಿದು ಬ್ಯಾಂಕ್ ಡಿಜಿಟಲ್ ಲಾಕರ್‌ನ ತಂದು ಬೀದೀಲಿ ಇಟ್ಟಿದ್ದಾರೆ ಅಂದ್ಕೊಂಡ್ರ.. ಖಂಡಿತಾ ಇಲ್ಲ!

ಹೇಳಿ ಕೇಳಿ ಇದು ಡಿಜಿಟಲ್ ಲಾಕರ್ ಅನ್ನೊದೇನೋ ಸರಿ. ಆದ್ರೆ ಇದ್ಯಾವುದೋ ಕಾಸು, ಬಂಗಾರ ಇಡೋ ಲಾಕರ್ ಅನ್ನೋದಕ್ಕಿಂತಲೂ ಪ್ರವಾಸಿಗರ ಲಗೇಜ್ ಸೇಫ್ ಮಾಡೋ ಸಿಸ್ಟಂ

ಅಂದಹಾಗೆ ಇದು ಮೈಸೂರಿಗೆ ಬರೋ ಪ್ರವಾಸಿಗರಿಗೆ ನ್ಯೂ ಫೀಚರ್. ಹಾಗಿದ್ರೆ ಹೇಗೆ ಕೆಲಸ ಮಾಡುತ್ತೆ ಈ ಡಿಜಿ ಲಾಕರ್ ಅನ್ನೋದನ್ನ ನೋಡೋಣ ಬನ್ನಿ

ಹೌದು, ಮೈಸೂರು ರೈಲ್ವೆ ನಿಲ್ದಾಣದಲ್ಲಿ ಅತ್ಯಾಧುನಿಕ ಸೌಲಭ್ಯಗಳು ಇರುವಂತಹ ಡಿಜಿಟಲ್ ಸ್ಮಾರ್ಟ್ ಲಗೇಜ್ ಲಾಕರ್ ಸೌಲಭ್ಯವನ್ನು ಒದಗಿಸಲಾಗಿದೆ

ಚುನಾವಣಾ ಪ್ರಚಾರದ ವೇಳೆ ಭಾರೀ ಅವಘಡ, ತೆರೆದ ವಾಹನದಿಂದ ಮುಗ್ಗರಿಸಿ ಬಿದ್ದ ತೆಲಂಗಾಣ ಸಿಎಂ ಪುತ್ರ!

ಸೇಫ್ ಲಾಕ್ ಸಂಸ್ಥೆಯು ಈ ವ್ಯವಸ್ಥೆಯನ್ನು ಕಲ್ಪಿಸಿದ್ದು ಕಡಿಮೆ ದರದಲ್ಲಿ, ಅತ್ಯಂತ ಸುರಕ್ಷಿತ ಲಗೇಜ್‌ಗಳನ್ನ ಇಲ್ಲಿಟ್ಟು ತಮ್ಮಿಷ್ಟ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದೆ

ಇಲ್ಲಿರೋ ಲಾಕರ್ ಡಿಸ್ಲೇ ಒತ್ತಿದ್ರೆ ಮೊಬೈಲ್‌ನ ನಂಬರ್ ಹಾಕುವ ಅಯ್ಕೆ ತೆರೆದುಕೊಳ್ಳುತ್ತದೆ

ನಂತರ ಮೇಲೆ ನಿಮ್ಮ ಮೊಬೈಲ್ ಗೆ  ಒಟಿಪಿ ಬರುತ್ತದೆ. ಆ ಓಟಿಪಿಯನ್ನು ಈ ಲಾಕರ್ ಗೆ ಹಾಕಿದರೆ ಸಾಕು ಕ್ಯೂ ಆರ್ ಕೋಡ್ ಸ್ಕ್ಯಾನರ್ ಬರುತ್ತದೆ

ಸ್ಕ್ಯಾನ್ ಮಾಡಿ  ಹಣವನ್ನು ಹಾಕಿದರೆ ಖಾಲಿ ಇರುವ ಲಾಕರ್ ತೆರೆದುಕೊಳ್ಳುತ್ತದೆ

ದೀಪಾವಳಿಗೆ ಬಿಗ್‌ ಗಿಫ್ಟ್‌, ಎಲ್‌‌ಪಿಜಿ ಸಿಲಿಂಡರ್‌ ಬೆಲೆ ಮತ್ತಷ್ಟು ಅಗ್ಗ!?

ಇದರಲ್ಲಿ ಮಧ್ಯಮ ಗಾತ್ರದ 5 ಲಾಕರ್, ದೊಡ್ಡ ಗಾತ್ರದ 6 ಹಾಗೂ ನಾಲ್ಕು ಅತಿ ದೊಡ್ಡ ಗಾತ್ರದ ಲಾಕರ್‌ಗಳಿವೆ. ಜೊತೆಗೆ ವಿವಿಧ ದರಗಳನ್ನು, 

ಗಂಟೆಗಳಿಗೆ ಅನ್ವಯಿಸಿ ನಿಗದಿಪಡಿಸಲಾಗಿದೆ. ಇನ್ನೊಂದು ವಿಶೇಷವೇನೆಂದರೆ ಈ ಲಾಕರ್ ನಲ್ಲಿ ನಿಮ್ಮ ಲಗೇಜ್ ಗೆ 5000 ಮೌಲ್ಯದ ವಿಮಾ ಸೌಲಭ್ಯವನ್ನು ಒದಗಿಸಲಾಗುತ್ತೆ

ಒಟ್ಟಿನಲ್ಲಿ ಮೈಸೂರಿಗೆ ಹೋದ್ರೆ  ಹೋಟೆಲ್, ರೂಂ ಅಂತಾ ಹುಡುಕೋ ಬದಲು ಈ ಡಿಜಿಟಲ್ ಲಾಕರ್ ಬಳಸಿದ್ರೆ ಸಾಕು ಎಲ್ಲವೂ ಸೇಫ್ ಆಗಿ ತೆಗೆದಿರಿಸಬಹುದಾಗಿದೆ

ಮ್ಯಾಕ್ಸ್‌ವೆಲ್ ಮೇಲೆ ಕಾಂತಾರದ ಗುಳಿಗ ದೈವ! ಅಭಿಮಾನಿಗಳಿಂದ ಎಲ್ಲಿಂದೆಲ್ಲಿಗೆ ಲಿಂಕ್?