ಸಂಸಾರದಲ್ಲಿ ಹೊಂದಾಣಿಕೆ ಇದ್ದರೆ ಜೀವನ ಸಂತೋಷದಿಂದ ತುಂಬಿರುತ್ತದೆ
ಹಾಗಾಗಿ ಅನೇಕ ಕೆಲಸಗಳನ್ನ ಗಂಡ-ಹೆಂಡತಿ ಒಟ್ಟಿಗೆ ಮಾಡಬೇಕು ಎನ್ನಲಾಗುತ್ತದೆ
ಹಾಗೆಯೇ, ಹೆಂಡತಿ ಇಲ್ಲದೇ ಗಂಡ ಕೆಲವೊಂದು ಕೆಲಸಗಳನ್ನ ಮಾಡಬಾರದು ಎನ್ನಲಾಗುತ್ತದೆ. ಆ ಕೆಲಸಗಳೇನು ಎಂಬುದು ಇಲ್ಲಿದೆ
ಸಂಸಾರದಲ್ಲಿ ಇಬ್ಬರು ಜೊತೆಯಾಗಿ ನಡೆದರೆ ಮಾತ್ರ ಅದೆಷ್ಟೇ ಕಷ್ಟಗಳು ಬಂದರೂ ಸಹ ಎದುರಿಸಲು ಸಾಧ್ಯವಾಗುತ್ತದೆ
ಗಂಡ-ಹೆಂಡತಿ ನಡುವೆ ಇರುವ ಬಾಂಧವ್ಯ ಬಹಳ ಮುಖ್ಯವಾಗುತ್ತದೆ. ಇಬ್ಬರೂ ಯಾವಾಗಲೂ ಒಟ್ಟಿಗೆ ಇರಬೇಕು
ಮನೆಯಲ್ಲಿ ದೇವರ ಪೂಜೆ ಮಾಡುವಾಗ ಅದರಲ್ಲೂ ಹಬ್ಬ ಹಾಗೂ ವಿಶೇಷ ದಿನಗಳದ್ದು ಹೆಂಡತಿ ಜೊತೆಯೇ ಇರಬೇಕು ಎನ್ನುವ ನಿಯಮವಿದೆ
ಪೂಜೆ ಮಾಡುವಾಗ ಗಂಡನ ಕೈ ಮುಟ್ಟುವುದರಿಂದ ಒಳ್ಳೆಯ ಫಲಗಳು ಸಿಗುತ್ತದೆ
ಕೆಲಸದ ಕಾರಣದಿಂದ ಮನೆಯಿಂದ ಹೊರಗೆ ಇರುವಾಗ ಗಂಡ-ಹೆಂಡತಿ ಒಟ್ಟಿಗೆ ಊಟ ಮಾಡಲು ಸಾಧ್ಯವಿಲ್ಲ
ಇನ್ನು ಮುಂದೆ ಹೋಟೆಲ್ಗಳಲ್ಲಿ ಗಂಟೆಗಟ್ಟಲೆ ಕೂರುವಂತಿಲ್ಲ; ಮಾಲೀಕರಿಂದ ಹೊಸ ನಿಯಮ ಜಾರಿ!
ಆದರೆ ಮನೆಯಲ್ಲಿ ಇರುವಾಗ ಹೆಂಡತಿಯನ್ನ ಬಿಟ್ಟು ಯಾವುದೇ ಕಾರಣಕ್ಕೂ ಊಟ ಮಾಡಬಾರದು. ಇದರಿಂದ ಸಮಸ್ಯೆಗಳಾಗುವ ಸಾಧ್ಯತೆ ಇದೆ
ಯಾವುದೇ ಹೋಮ-ಹವನಗಳನ್ನ ಮಾಡುವಾಗ ಗಂಡನ ಪಕ್ಕ ಹೆಂಡತಿ ಇರಲೇಬೇಕಂತೆ ಇದರಿಂದ ಪೂಜೆಯ ಫಲಗಳು ಸಿಗುತ್ತದೆ ಎನ್ನುವ ನಂಬಿಕೆ ಇದೆ
ಹಾಗಾಗಿ ಹೆಂಡತಿ ಇಲ್ಲದೇ ಹೋಮಗಳನ್ನ ಮಾಡಬೇಡಿ
ದಾನ ಮಾಡುವುದು ಬಹಳ ಪುಣ್ಯದ ಕಾರ್ಯ. ಆದರೆ ಹೆಂಡತಿ ಇಲ್ಲದೇ ದಾನ ಮಾಡಬಾರದು
ನಿಮ್ಮ ಭವಿಷ್ಯ ಹೇಳುತ್ತಂತೆ ಹಣೆಯ ಮೇಲಿನ ರೇಖೆಗಳು! ಈ ರೀತಿ ಇದ್ರೆ ಅದೃಷ್ಟ ಹುಡುಕಿ ಬರುತ್ತಂತೆ