ಮಾನಸ ಗಂಗೋತ್ರಿಯ ಆವರಣದಲ್ಲಿ ಇರುವ ಜಯಲಕ್ಷ್ಮಿ ವಿಲಾಸ ಅರಮನೆಗೆ ಇದೀಗ ನವೀಕರಣ ಭಾಗ್ಯ ಸಿಕ್ಕಿದೆ
ಶಿಥಿಲಾವಸ್ಥೆಯಲ್ಲಿದ್ದ ಅರಮನೆಯನ್ನು ಅಮೆರಿಕದ ರಾಯಭಾರ ಕಛೇರಿ ಸಂಸ್ಥೆ, ಡೆಕ್ಕನ್ ಹೆರಿಟೇಜ್ ಫೌಂಡೇಷನ್ ಸಂಸ್ಥೆ ಮತ್ತು ಹರೀಶ್&ಬಿನಾ ಶಾ ಫೌಂಡೇಶನ್ ವತಿಯಿಂದ ವಿಲಾಸ ಅರಮನೆಯನ್ನು 30 ಕೋಟಿ ರೂಪಾಯಿ ಅನುದಾನದಲ್ಲಿ ನವೀಕರಣ ನಡೆಸಲಾಗುತ್ತಿದೆ
1905ರಲ್ಲಿ ಮೈಸೂರಿನ ಅಂದಿನ ಒಡೆಯರ್ ಆಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ಈ ಅರಮನೆ ನಿರ್ಮಿಸಿದ್ದರು
ಜಯಲಕ್ಷ್ಮಿ ಅಮ್ಮಣ್ಣಿಯವರು 1897ರಲ್ಲಿ ಕಾಂತರಾಜ ಅರಸ್ ಅವರನ್ನು ವಿವಾಹವಾಗಿದ್ದರು
ಈ ದಂಪತಿಗಳಿಗೆ ಜಯಲಕ್ಷ್ಮಿ ವಿಲಾಸ ಅರಮನೆಯನ್ನು ಕೃಷ್ಣರಾಜ ಒಡೆಯರ್ ಉಡುಗೊರೆಯಾಗಿ ನೀಡಿದ್ದರು
ನೂರು ವರ್ಷಗಳ ನಂತರ ಇದೀಗ ಆ ಅರಮನೆ ಮತ್ತೆ ನವೀಕರಣಗೊಳ್ಳುತ್ತಿದೆ
ಹರೀಶ್ & ಬಿನಾ ಶಾ ಫೌಂಡೇಶನ್, ಎಎಫ್‌ಸಿಪಿ ನಿಧಿಯಲ್ಲಿ ನವೀಕರಣಗೊಳ್ಳಲಿರುವ ಅರಮನೆಯನ್ನು ಡೆಕ್ಕರ್ ಹೆರಿಟೇಜ್ ಫೌಂಡೇಶನ್ ಹೊಸ ರೂಪ ನೀಡಲಿದೆ
2027ರ ಹೊತ್ತಿಗೆ ಇದರ ಕಾರ್ಯ ಪೂರ್ಣಗೊಳ್ಳಲಿದೆ
Heavy Rain: ಮುಂದಿನ 5 ದಿನ ಗುಡುಗು, ಮಿಂಚು ಸಹಿತ ಭಾರೀ ಮಳೆ, ಈ ಜಿಲ್ಲೆಗೆ ಅಂತೂ ಇಂತೂ ವರುಣದೇವನ ಕೃಪೆ